ಬಿಪಿನ್ ರಾವತ್ ಸಾವು ಸಂಭ್ರಮಿಸಿದವರ ವಿರುದ್ಧ ಕ್ರಮಕ್ಕೆ ಸೂಚನೆ- ಸಿಎಂ ಬಸವರಾಜ ಬೊಮ್ಮಾಯಿ. ಹಾವೇರಿ,ಡಿಸೆಂಬರ್,10,2021(..):ಸಿಡಿಎಸ್ ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ , ಸಿಡಿಎಸ್ ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ರಾವತ್ ಸಾವಿಗೆ ಸಂಭ್ರಮಿಸಿ ವಿಕೃತಿ ಮೆರೆದಿದ್ದಾರೆ. ಇಡೀ ದೇಶವೇ ಬಿಪಿನ್ ರಾವತ್ ಸಾವಿಗೆ ಕಂಬನಿ‌ ಮಿಡಿಯುತಿದೆ. ಅದರೆ ಕೆಲವರು ಅವರ ಸಾವನ್ನ ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಗಳನ್ನ ಹಾಕಿರೋದು ತೀರಾ ಖಂಡನೀಯ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ನಿನ್ನೆ ಏರ್ ಫೋರ್ಸ್ ಕಮಾಂಡೋ ಆಸ್ಪತ್ರೆಗೆ ಭೇಟಿ ನೀಡಿ ಗ್ರೂಪ್ ಕ್ಯಾಪ್ಟನ್ ವರುಣ ಪ್ರತಾಪ ಸಿಂಗ್ ಬಗ್ಗೆ ಮಾಹಿತಿ ಪಡೆದುಕೊಂಡು ಬಂದಿದ್ದೇನೆ. ಅಲ್ಲಿ ಉತ್ತಮ ವೈದ್ಯರ ತಂಡವಿದೆ ಎಂದು ಇದೆ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದರು. : - – - – - .