ಸೇನಾ ಹೆಲಿಕಾಪ್ಟರ್ ದುರಂತ: ಚಿಕಿತ್ಸೆ ಫಲಿಸದೇ ಸಿಡಿಎಸ್ ಬಿಪಿನ್ ರಾವತ್ ಸಾವು. ಊಟಿ,ಡಿಸೆಂಬರ್,8,2021(..):ತಮಿಳುನಾಡಿನ ಊಟಿಯ ಕೂನೂರು ಬಳಿ ಸಂಭವಿಸಿದ -12V5 ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರ ಗಾಯಗೊಂಡು ಬದುಕಿಳಿದಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ವಾಯುಪಡೆಯಿಂದ ಅಧಿಕೃತಿ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ಊಟಿಯ ಕೂನೂರು ಬಳಿ ಮಧ್ಯಾಹ್ನ ಪತನವಾಗಿತ್ತು. ಸೇನೆಯ ಹಿರಿಯ ಅಧಿಕಾರಿಗಳು ಸೇರಿ ಒಟ್ಟು 14 ಮಂದಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ () ಬಿಪಿನ್​ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಕೂಡ ಇದ್ದರು. ಇದೀಗಸಿಡಿಎಸ್​ ಬಿಪಿನ್​ ರಾವತ್ ಪತ್ನಿ ಮಧುಲಿಕಾ ರಾವತ್​ ಅವರು ಸಾವನ್ನಪ್ಪಿದ್ದರು. ಇದೀಗ ಬಿಪಿನ್ ರಾವತ್ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. : –- - – -