ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ನಾಶ- ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ. ಹಾಸನ,ಡಿಸೆಂಬರ್,6,2021(..):ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಿದ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಇಲ್ಲವಾ..? ಒಂದೇ ಕುಟುಂಬದ ಎಂಎಲ್ ಎ ಎಂಎಲ್ ಸಿಗಳು ಇಲ್ಲವಾ..? ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ನಾಶವಾಗಲಿದೆ. ಕಾಂಗ್ರೆಸ್ ಹೆಸರನ್ನಾದ್ರೂ ಉಳಿಸಿಕೊಳ್ಳಲಿ. ದೇಶದಲ್ಲಿ ಕಾಂಗ್ರೆಸ್ ಇಲ್ಲವಾಗಿದೆ ರಾಜ್ಯದಲ್ಲೂ ಅದೇ ಪರಿಸ್ಥಿತಿ ಬರಲಿದೆ ಎಂದು ಕಿಡಿಕಾರಿದರು. : - – - -