ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಗೆ ಸಲ್ಲುವ ನಾಯಕ: ಬಿಜೆಪಿಗೆ ಅವರ ಅಗತ್ಯವಿಲ್ಲ- ಸಚಿವ ಅಶ್ವಥ್ ನಾರಾಯಣ್ ಬೆಂಗಳೂರು,ಡಿಸೆಂಬರ್,6,2021(..):ನಾನು ಬಿಜೆಪಿಗೆ ಹೋಗಿಲ್ಲವೆಂದು ನನ್ನನ್ನ ಜೈಲಿಗೆ ಕಳಿಸಿದ್ರು ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್, ಡಿಕೆ ಶಿವಕುಮಾರ್ ಅವರನ್ನ ನಮ್ಮ ಪಕ್ಷಕ್ಕೆ ಸ್ವಾಗತ ಮಾಡಿಲ್ಲ. ಅವರು ಬಿಜೆಪಿಗೆ ಸಲ್ಲುವವರಲ್ಲ. ಕಾಂಗ್ರೆಸ್ ಗೆ ಸಲ್ಲುವ ನಾಯಕ. ಅವರ ತತ್ವ ಸಿದ್ಧಂತ ಕಾಂಗ್ರೆಸ್ ಮಾತ್ರ ಸಲ್ಲುತ್ತದೆ. ಬಿಜೆಪಿಯಲ್ಲೇ ಹಲವು ದೊಡ್ಡ ದೊಡ್ಡ ನಾಯಕರಿದ್ದಾರೆ. ಡಿಕೆಶಿ ಅಗತ್ಯ ಬಿಜೆಪಿಗೆ ಇಲ್ಲ ಎಂದರು. ಕೊರೋನಾ ಸೋಂಕು ಹೆಚ್ಚಾದರೆ ಎದುರಿಸಲು ಸರ್ಕಾರ ಸಿದ್ಧವಿದೆ. ಅಗತ್ಯವಿದ್ದರೇ ಸಿಎಂ ಬಸವರಾಜ ಬೊಮ್ಮಾಯಿ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಾರೆ. ಕಡ್ಡಾಯವಾಗಿ ಕೋವಿಡ್ ನಿಯಮಗಳ ಪಾಲನೆಗೆ ಯತ್ನಿಸುತ್ತೇವೆ . ರಾಜ್ಯ ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ. ಒಮಿಕ್ರಾನ್ ನಿಂದ ಆತಂಕ ಪಡುವ ಅಗತ್ಯವಿಲ್ಲ ಎಂದರು. : - - - - -