ಪರಿಸ್ಥಿತಿ ಕೈಮೀರಿದ್ರೆ ಮಾತ್ರ ಕಠಿಣ ಕ್ರಮ: ಮಕ್ಕಳನ್ನ ಧೈರ್ಯವಾಗಿ ಶಾಲೆಗೆ ಕಳುಹಿಸಿ- ಶಿಕ್ಷಣ ಸಚಿವ ಬಿಸಿ ನಾಗೇಶ್. ಬೆಂಗಳೂರು,ಡಿಸೆಂಬರ್,7,2021(..):ಮಕ್ಕಳ ಮೇಲೆ ಒಮಿಕ್ರಾನ್ ಪರಿಣಾಮ ಬೀರಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಪೋಷಕರಲ್ಲಿ ಆತಂಕಬೇಡ. ಮಕ್ಕಳನ್ನ ಧೈರ್ಯವಾಗಿ ಶಾಲೆಗೆ ಕಳುಹಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಮಕ್ಕಳನ್ನ ಜೋಪಾನ ಮಾಡುವುದು ನಮ್ಮ ಹೊಣೆ. ಪರಿಸ್ಥಿತಿ ಕೈಮೀರಿದ್ರೆ ಮಾತ್ರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳ ಮೇಲೆ ಒಮಿಕ್ರಾನ್ ಪರಿಣಾಮ ಬೀರಲ್ಲ. ಒಮಿಕ್ರಾನ್ ಮಕ್ಕಳಿಗೆ ಅಪಾಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮಕ್ಕಳನ್ನ ರಕ್ಷಿಸುವ ಹೊಣೆ ಸರ್ಕಾರದ್ದು ಎಂದರು. ಪೋಷಕರು ಧೈರ್ಯವಾಗಿರಿ ಆತಂಕಬೇಡ. ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆ ಮಾಡಿ ಕಳುಹಿಸಿ. ಪೋಷಕರು ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು. : - –- - - . … : - .. , 7, 2021 (..): “ . , . ,” .. . , ’ .: .. / / /