2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು: ಸರಣಿ ವಶ. ಮುಂಬೈ,ಡಿಸೆಂಬರ್,6,2021(..):ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 372 ರನ್ ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಟೆಸ್ಟ್ ಸರಣಿ ವಶಕ್ಕೆ ಪಡೆದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 540 ರನ್ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ಮೂರನೇ ದಿನದಾಟದ ಅಂತ್ಯದಲ್ಲಿ ಐದು ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಇಂದು ನಾಲ್ಕನೇ ದಿನದಲ್ಲಿ ನ್ಯೂಜಿಲ್ಯಾಂಡ್ 167 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಟೀಂ ಇಂಡಿಯಾ ವಿರುದ್ಧ ಮಂಡಿಯೂರಿತು. ಇನ್ನು ಮಾರಕ ಸ್ಪಿನ್ ದಾಳಿ ನಡೆಸಿದ ಆರ್.ಅಶ್ವಿನ್ ಮತ್ತು ಜಯಂತ್ ಯಾದವ್ ತಲಾ 4 ವಿಕೆಟ್ ಕಬಳಿಸಿದರು. ಇದಕ್ಕೂ ಮೊದಲು ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 62 ರನ್​ಗೆ ಸರ್ವಪತನ ಕಂಡು ನ್ಯೂಜಿಲ್ಯಾಂಡ್ ಕೆಟ್ಟ ದಾಖಲೆ ಬರೆದಿತ್ತು. ಈ ಗೆಲುವಿನೊಂದಿಗೆ ಭಾರತ 1-0 ಅಂತರದಿಂದ ಮುನ್ನಡೆ ಪಡೆದುಕೊಂಡು ಟೆಸ್ಟ್ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ. ಭಾರತ ಮೊದಲ ಇನ್ನಿಂಗ್ಸ್ 325 ಮತ್ತು ಎರಡನೇ ಇನ್ನಿಂಗ್ಸ್ 276-7ಕ್ಕೆ ಡಿಕ್ಲೇರ್ ನ್ಯೂಜಿಲ್ಯಾಂಡ್: ಮೊದಲ ಇನ್ನಿಂಗ್ಸ್ 62 ಮತ್ತು ಎರಡನೇ ಇನ್ನಿಂಗ್ಸ್ 167 : - – – 2nd - … 2nd : , 6, 2021 (..): 2nd 372 . , . 540 , 140 . , , 167 . . . , 62 . , 1-0 . : 325 : 276-7 : – 62 167Keywords: / 2nd /