ಕೊರೋನಾ ಹಾಟ್ ಸ್ಪಾಟ್ ಗಳ ಮೇಲೆ ನಿಗಾ ಇಡಿ- ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪತ್ರ. ನವದೆಹಲಿ,ಡಿಸೆಂಬರ್,5,2021(..):ದೇಶದಲ್ಲಿ ಕೊರೋನಾ ಹೊಸತಳಿ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದು ಈಗಾಗಲೇ ನಾಲ್ಕು ಪ್ರಕರಣಗಳು ಪತ್ತೆಯಾಗಿದೆ. ಈ ಮಧ್ಯೆ ಒಮಿಕ್ರಾನ್ ವೇಗವಾಗಿ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದು, ಒಮಿಕ್ರಾನ್ ಹರಡದತೆ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪತ್ರ ಬರೆದಿದೆ. ಕೊರೊನಾ ಹಾಟ್ ಸ್ಪಾಟ್ ಗಳ ಮೇಲೆ ನಿಗಾ ಇಡಿ. ಹೈರಿಸ್ಕ್ ದೇಶಗಳಿಂದ ಬಂದ ವ್ಯಕ್ತಿಗಳ ಮೇಲೆ ನಿಗಾ ಇಡಿ. ಸ್ಯಾಂಪಲ್ಸ್ ಜೀನೋಮ್ ಟೆಸ್ಟ್ ಗೆ ಕಳುಹಿಸಿ. ಒಮಿಕ್ರಾನ್ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಸೂಚನೆ ನೀಡಿದೆ. : .– - - – 6 –-