ಸ್ವಾಮೀಜಿಗಳೇ ಸ್ವಪ್ರೇರಣೆಯಿಂದ ಹೇಳಿದ್ರೋ ಅಥವಾ ಡಿಕೆಶಿ ಹೇಳಿಸಿದ್ರೋ ಗೊತ್ತಿಲ್ಲ- ಆರ್.ಅಶೋಕ್ ಬೆಂಗಳೂರು, ಜೂನ್​ 27,2024 (..):ಡಿಕೆ ಶಿವಕುಮಾರ್ ​ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್,ಅಶೋಕ್, ಸ್ವಾಮೀಜಿಗಳೇ ಸ್ವಪ್ರೇರಣೆಯಿಂದ ಹೇಳಿದ್ರೋ ಅಥವಾ ಡಿಕೆಶಿ ಹೇಳಿಸಿದ್ರೋ ಗೊತ್ತಿಲ್ಲ ಎಂದು ಟೀಕಿಸಿದರು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,ಸ್ವಾಮೀಜಿಗಳೇ ಸ್ವಪ್ರೇರಣೆಯಿಂದ ಹೇಳಿದರೋ ಅಥವಾ ಡಿಕೆ ಶಿವಕುಮಾರ್ ಹೇಳಿಸಿದರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯದ ಒಳಗೆ ಹೋಗಿ ತಿಳಿದುಕೊಳ್ಳುವ ಸಾಮರ್ಥ್ಯ ಇದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಎಂದು ಆಗಿರಲಿಲ್ಲ. ಮೊದಲ ಬಾರಿಗೆ ಸಿಎಂ ಎದುರಿಗೆ ನೀವು ರಾಜೀನಾಮೆ ನೀಡಿ ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಧರ್ಮಾರ್ಥನಾದರೆ ರಾಜೀನಾಮೆ ನೀಡಿ. ಇಷ್ಟು ಅವಮಾನ ಆಗಿಯೂ ಸಿಎಂ ಆಗಿ ಮುಂದುವರಿಯಬಾರದು ಎಂದು ವಾಗ್ದಾಳಿ ನಡೆಸಿದರು. ಡಿಕೆ ಶಿವಕುಮಾರ್​ ಗೆ ಅವರ ತಮ್ಮನ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ಸಿದ್ದರಾಮಯ್ಯ ತಂತ್ರಕ್ಕೆ ಇದೊಂದು ಪ್ರತಿತಂತ್ರ ಅಷ್ಟೇ. ಮೂರು ಡಿಸಿಎಂಗಳಿಗೆ ಹಿನ್ನೆಲೆ ಗಾಯಕರೇ ಸಿದ್ದರಾಮಯ್ಯ ಎಂದು ಆರ್.ಅಶೋಕ್ ಹೇಳಿದರು. : – ---.