ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ: ಆರೋಪಿ ಗೋಪಾಲಕೃಷ್ಣಗೆ ಜಾಮೀನು ಮಂಜೂರು. ಬೆಂಗಳೂರು,ಡಿಸೆಂಬರ್,3,2021(..):ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌ ಕೊಲೆಗೆ ಸಂಚು ರೂಪಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಪಾಲಕೃಷ್ಣ ಜಡ್ಜ್ ಎದುರು ಶರಣಾಗಿದ್ದಾರೆ. ಶಾಸಕ ಎಸ್‌.ಆರ್‌ ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗ್ತಿದ್ದ ಆರೋಪಿ ಗೋಪಾಲಕೃಷ್ಣ ಇಂದು 2ನೇ ಎಸಿಜೆಎಂ ನ್ಯಾಯಾಲಯದಲ್ಲಿ ನ್ಯಾಯಾಧೀಶರೆದುರು ಶರಣಾಗಿದ್ದಾರೆ. ಆರೋಪಿ ಗೋಪಾಲಕೃಷ್ಣಗೆ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಕುರಿತು ಕೇಸ್‌ ದಾಖಲಾಗುತ್ತಿದ್ದಂತೆ ಗೋಪಾಲಕೃಷ್ಣ ನಾಪತ್ತೆಯಾಗಿದ್ದು ನಂತರ ಇದೀಗ ಇಂದು ಏಕಾಏಕಿ ಜಡ್ಜ್ ಎದುರು ಶರಣಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ಧ ಬಗ್ಗೆ ವಿಡಿಯೋ ಬಹಿರಂಗವಾಗಿತ್ತು. ವಿಡಿಯೋದಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಹಾಗೂ ಬೆಳ್ಳಿ ದೇವರಾಜ್ ಮಾತನಾಡಿದ್ದು ವೈರಲ್ ಆಗಿ. ಈ ಕುರಿತು ಎಸ್.ಆರ್ ವಿಶ್ವನಾಥ್ ದೂರು ನೀಡಿದ್ದರು. : - - –- - –