ಮೂವತ್ತು ವರ್ಷಗಳ ಪ್ರೀತಿ: 65ನೇ ವಯಸ್ಸಲ್ಲಿ ಮದುವೆಯಾದ ಜೋಡಿ. ಮಂಡ್ಯ,ಡಿಸೆಂಬರ್,2,2021(..):ಸತತ ಮೂವತ್ತೈದು ವರ್ಷ ಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಕಡೆಗೂ ತಮ್ಮ ಇಳಿವಯಸ್ಸಿನಲ್ಲಿ ಮದುವೆಯಾಗಿ ಸತಿ ಪತಿಯಾದ ಅಪರೂಪದ ಘಟನೆ ಮಂಡ್ಯದ ಮೇಲುಕೋಟೆಯಲ್ಲಿ ನಡೆದಿದೆ. 30 ವರ್ಷಗಳಿಂದ ಪ್ರೀತಿಸಿ ಕಡೆಗೆ ಈ ಜೋಡಿ 65 ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ‌ಮತ್ತು‌ ಜಯಮ್ಮ ಕಳೆದ 30 ವರ್ಷಗಳಿಂದ ಪ್ರೀತಿಸುತ್ತಿದ್ದು ಇದುವರೆಗೂ ಇವರು ಮದುವೆಯಾಗಿರಲಿಲ್ಲ. ಇದೀಗ ಇಳಿವಯಸ್ಸಿನಲ್ಲಿ ಈ ಇಬ್ಬರ ಪ್ರೀತಿ ಫಲಿಸಿ ಕಂಕಣ ಭಾಗ್ಯ ಕೂಡಿ ಬಂದ ಹಿನ್ನೆಲೆಯಲ್ಲಿ ಇಂದು ಮೇಲುಕೋಟೆ ಚಲುವರಾಯಸ್ವಾಮಿ ದೇವಾಲಯದ ಮುಂಭಾಗ ಶ್ರೀನಿವಾಸ್ ಗುರೂಜೀ ಅವರ ಆಶ್ರಮದಲ್ಲಿ ಇಬ್ಬರ ಮದುವೆ ನೆರವೇರಿತು. : --- - -65 -