ಕ್ಯಾನ್ಸರ್ : ಚಿಕಿತ್ಸಗೆ ಸಹಾಯ ಹಸ್ತ ಚಾಚುವಂತೆ ಮನವಿ. ಮೈಸೂರು, ನ.30, 2021 : (.. ) : ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಆರ್ಥಿಕ ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೆ ಈಗಾಗಲೇ ಹಲವಾರು ಲಕ್ಷಗಳನ್ನು ವ್ಯಯಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮತ್ತಷ್ಟು ಹಣದ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದಾರೆ.ಅವರು ಮಾಡಿರುವ ಮನವಿ ಹೀಗಿದೆ… ಸ್ನೇಹಿತರೆ, ನನ್ನ ಹೆಸರು ಮಂಜುನಾಥ್. ನನಗೀಗ ೩೨ ವರ್ಷ ವಯಸ್ಸು. ನವೆಂಬರ್ ೨೦೨೦ರಲ್ಲಿ ನನಗೆ ತೀವ್ರ ಕತ್ತು ನೋವು ಕಂಡು ಬಂತು. ವೈದ್ಯರು ತಪಾಸಣೆ ನಡೆಸಿ ನನಗೆ ನೇಸೊಫ್ಯಾರಿಂಜಿಯಲ್ ಕ್ಯಾನ್ಸರ್ (ಗಂಟಲು ಕ್ಯಾನ್ಸರ್) ಇದೆ ಎಂದು ಮಾಹಿತಿ ನೀಡಿದರು.ನಂತರ ಬೆಂಗಳೂರಿನ ಹೆಚ್‌ಸಿಜಿ ಆಸ್ಪತ್ರೆಯಲ್ಲಿ ೩೫ ದಿನಗಳ ಕಾಲ ರೇಡಿಯೇಷನ್ ಥೆರಪಿ ಮತ್ತು ೯ ಬಾರಿ ಖೀಮೊಥೆರಪಿಗೆ ಒಳಗಾಗಬೇಕಾಯಿತು. ಇದಕ್ಕಾಗಿ ನನಗೆ ಏಪ್ರಿಲ್ ೨೦೨೧ರವರೆಗೆ ಒಟ್ಟು ರೂ. ೧೨ ಲಕ್ಷ ಖರ್ಚಾಗಿದೆ.ಆಗಸ್ಟ್ ೨೦೨೧ರಲ್ಲಿ ಮತ್ತೊಮ್ಮೆ ಖಾಯಿಲೆ ಮರುಕಳಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಯಿತು. ಇದಕ್ಕಾಗಿ ಪ್ರಸ್ತುತ ನನಗೆ ರೊಬೊಟಿಕ್ ಶಸ್ತçಚಿಕಿತ್ಸೆ ನಡೆಸಬೇಕಾಗಿದ್ದು, ಇದಕ್ಕೆ ರೂ.೧೫ ಲಕ್ಷ ವೆಚ್ಚವಾಗುತ್ತದೆ. ಇದಾದ ನಂತರ ಪ್ರೊಟಾನ್ ಥೆರಿಪಿ ಪಡೆಯಬೇಕಿದ್ದು ಅದಕ್ಕೆ ಪ್ರತ್ಯೇಕವಾಗಿ ರೂ.೩೦ ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ಅಂದಾಜಿಸಿದ್ದಾರೆ.ನನ್ನ ಕುಟುಂಬದಲ್ಲಿ ನಾನೊಬ್ಬನೇ ದುಡಿಯುತ್ತಿರುವ ವ್ಯಕ್ತಿಯಾಗಿದ್ದು, ನನ್ನ ಪೋಷಕರೂ ಸಹ ಜೀವನೋಪಾಯಕ್ಕಾಗಿ ನನ್ನನ್ನೇ ಅವಲಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಬಳಿ ಇದ್ದಂತಹ ಉಳಿತಾಯದ ಸಂಪೂರ್ಣ ಮೊತ್ತ ಖರ್ಚಾಗಿದ್ದು ಬಹಳ ತೊಂದರೆಯಲ್ಲಿದ್ದೇನೆ.ಹಾಗಾಗಿ ನನ್ನ ಈ ಗಂಭೀರವಾದ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುವಂತೆ ಅತ್ಯಂತ ಕಳಕಳಿಯಿಂದ ಈ ಮೂಲಕ ಎಲ್ಲರನ್ನೂ ಮವನಿ ಮಾಡುತ್ತಿದ್ದೇನೆ. ನಿಮ್ಮ ಸಹಾಯದಿಂದ ನಾನು ಬದುಕುಳಿಯಬಹುದು ಮತ್ತು ನನ್ನ ಕುಟುಂಬಕ್ಕೆ ಸಹಾಯವಾಗಬಹುದು. ದೇಣಿಗೆ ನೀಡಲು ಬಯಸುವವರು ಗೂಗಲ್‌ಪೇ ಅಥವಾ ಫೋನ್‌ಪೇ ಮೂಲಕ 8660702210 (ಮಂಜುನಾಥ್ ಹಾಗೂ ಮದನ್) ಈ ಸಂಖ್ಯೆಗೆ ಕಳುಹಿಸಬಹುದು.ಬ್ಯಾಂಕ್ ಖಾತೆ ಸಂಖ್ಯೆ: 39332697685IFSC : SBIN0040211 : - -- : , 32 2020 . 35 9 () 12 2021. 2021 15 . 30 . . . . 8660702210. ( & ) #39332697685IFSC : SBIN0040211