ವಿಶ್ವನಾಥ್ ಹತ್ಯೆಗೆ ಸ್ಕೆಚ್..? ಮಾಹಿತಿ ಪಡೆದು ಕಾನೂನು ಕ್ರಮ ಎಂದ ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಡಿಸೆಂಬರ್,1,2021(..):ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೇಚ್ ಹಾಕಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂದ ಸಿಸಿಬಿ ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣ ಎಂಬುವವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಎಸ್.ಆರ್ ವಿಶ್ವನಾಥ್ ಬಗ್ಗೆ ಗೋಪಾಲಕೃಷ್ಣ ಮಾತನಾಡಿದ್ಧನ್ನ ಕುಳ್ಳದೇವರಾಜ್ ಸ್ಟಿಂಗ್ ವಿಡಿಯೋ ಮಾಡಿದ್ದನು. ಇದರಲ್ಲಿ ಎಸ್.ಆರ್ ವಿಶ್ವನಾಥ್ ಅವರ ವಿರುದ್ಧ ಗೋಪಾಲಕೃಷ್ಣ ಮಾತನಾಡಿದ್ದನು. ಈ ವಿಡಿಯೋ ಮೂಲಕ ಶಾಸಕ ಎಸ್.ಆರ್ ವಿಶ್ವನಾಥ್ ಗೆ ಹತ್ತಿರವಾಗಲು ಕುಳ್ಳದೇವರಾಜ್ ಯತ್ನಿಸಿದ್ದ ಎನ್ನಲಾಗಿದೆ. ಈ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಎಸ್.ಆರ್ ವಿಶ್ವನಾಥ್ ಸೂಚಿಸಿದ್ಧರು. ಈ ಹಿನ್ನೆಲೆಯಲ್ಲಿ ಇಬ್ಬರನ್ನ ಸಿಸಿಬಿ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಅಧಿಕಾರಿಗಳ ಬಳಿ ಮಾಹಿತಿ ಪಡೆಯುತ್ತೇನೆ. ಎಸ್.ಆರ್ ವಿಶ್ವನಾಥ್ ಜೊತೆ ಮಾತಾಡುತ್ತೇನೆ. ವಿಶ್ವನಾಥ್ ಹೇಳಿಕೆ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : - - - - – – . … …? , 1, 2021 (..): .. . . .. . , .. . .. . , . , . , , .. . “ .. ,” .: / .. / /