ಡಿ.16ರಂದು ತೆರೆಗೆ ‘ಸ್ಪೈಡರ್ ಮ್ಯಾನ್: ನೋ ವೇ ಟು ಹೋಮ್’ ಬೆಂಗಳೂರು, ಡಿಸೆಂಬರ್ 01, 2021 (..):ಅಮೆರಿಕಕ್ಕಿಂತ ಮೊದಲು ಭಾರತದಲ್ಲಿ ಸ್ಪೈಡರ್ ಮ್ಯಾನ್: ನೋ ವೇ ಟು ಹೋಮ್ ಬಿಡುಗಡೆಯಾಗಲಿದೆ. ಈ ಕುರಿತು ಸಿನಿಮಾ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಮಾಹಿತಿ ನೀಡಿದೆ. ಟಿಮ್ ಹಾಲೆಂಡ್ ಅಭಿನಯದ ಈ ಸಿನಿಮಾ ಡಿಸೆಂಬರ್ 16ರಂದು ತೆರೆ ಕಾಣುತ್ತಿದೆ. ಭಾರತದಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸೋನಿ ಪಿಕ್ಚರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ವೆಲ್ ಸೂಪರ್ ಹೀರೋ ಸ್ಪೈಡರ್ ಮ್ಯಾನ್ ಟ್ರೇಲರ್ ಕೂಡಾ ದಾಖಲೆ ಬರೆದಿತ್ತು. ಅತಿ ಹೆಚ್ಚು ಮಂದಿ ವೀಕ್ಷಿಸಿದ ದಾಖಲೆಯನ್ನು ಸ್ಪೈಡರ್ ಮ್ಯಾನ್: ನೋ ವೇ ಟು ಹೋಮ್ ಬರೆದಿತ್ತು.