: ಬೆಂಗಳೂರು ಉತ್ತರ ವಿವಿ : ನೂತನ ಕುಲಪತಿಯಾಗಿ ಪ್ರೊ.ನಿರಂಜನ ವಾನಳ್ಳಿ ನೇಮಕ ಮೈಸೂರು, ನ.30, 2021 : (.. ) : ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ನೇಮಕ. ರಾಜ್ಯಪಾಲ ತೋಮರ್ ಚಂದ್ ಗೆಹ್ಲೋಟ್ ಅವರಿಂದ ಈ ಸಂಬಂಧ ಅಧಿಕೃತ ಆದೇಶ. ಕೋಲಾರದಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಪ್ರೊ.ಟಿ.ಡಿ.ಕೆಂಪರಾಜು 26-07-2017 ರಲ್ಲಿ ನೇಮಕಗೊಂಡಿದ್ದರು. ಅವರ 4 ವರ್ಷಗಳ ಅವಧಿ 25-07-2021 ರಲ್ಲಿ ಪೂರ್ಣಗೊಂಡಿತ್ತು. ಬಳಿಕ ಹಿರಿಯ ಡೀನ್ ಡಾ.ಡಿ.ಕುಮುದಾ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಕುಲಪತಿ ಶೋಧನಾ ಸಮಿತಿ ಶಿಫಾರಸ್ಸಿನ ಆಧಾರದ ಮೇರೆಗೆ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ಅವರನ್ನು ನೂತನ ಕುಲಪತಿಯಾಗಿ ನೇಮಕ ಮಾಡಲಾಗಿದೆ. : ------.