ಫೇಸ್ ಬುಕ್ ಪೇಜ್ ಮೂಲಕ 5 ಮಿಲಿಯನ್ ಮುಟ್ಟಿದ ‘ ಕನ್ನಡ’ …! ಮೈಸೂರು, ನ.30, 2021 : (.. ) ಪ್ರೀತಿಯ ನೆಟಿಝನ್ಸ್ ಗೆ ಅನಂತ ಅನಂತ ನಮನಗಳು. ಸಂತಸದ ವಿಚಾರವೊಂದನ್ನ ನಿಮ್ಮ ಬಳಿ ಹಂಚಿಕೊಳ್ಳುವ ಕಾತರ ನಮ್ಮದಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹದ ಸಹಕಾರದಿಂದ ‘ಜಸ್ಟ್ ಕನ್ನಡ’ ಜಾಲತಾಣದಲ್ಲಿ ಮತ್ತೊಂದು ದಾಖಲೆಯ ಮೈಲುಗಲ್ಲು ಸವೆಸಿದೆ. ಫೇಸ್ ಬುಕ್ ಪೇಜ್ ಮೂಲಕ ಬರೋಬ್ಬರಿ 5 ಮಿಲಿಯನ್ ವೀಕ್ಷಣೆ ಪಡೆಯುವುದರ ಜತೆಗೆ ( ನ.02 ರಿಂದ 29 ) ಏರುಗತಿಯಲ್ಲೇ ಮುಂದೆ ಸಾಗುತ್ತಿದೆ. ಆ ಮೂಲಕ ‘ ಜಸ್ಟ್ ಕನ್ನಡದ’ ಕಳೆದ ವರ್ಷದ ರೆಕಾರ್ಡ್ ಬ್ರೇಕ್ ಮಾಡಿ ಮತ್ತೊಂದು ದಾಖಲೆಗೆ ಮುನ್ನುಡಿ ಬರೆದಿದೆ. ಅದು ರಾಜ್ಯೋತ್ಸವದ ತಿಂಗಳಲ್ಲೇ ಈ ಗುರಿ ಮುಟ್ಟಿರುವುದು ಹೆಮ್ಮೆಯ ಸಂಗತಿಯೇ ಸರಿ. ಕಳೆದ 12 ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಸ್ನೇಹಿತರು ಮತ್ತು ಹಿತೈಷಿಗಳ ಸಹಕಾರ ಮರೆಯಲಾಗದು. ಈ ಎಲ್ಲರ ಪ್ರೋತ್ಸಾಹದ ಕಾರಣದಿಂದ ‘ಜಸ್ಟ್ ಕನ್ನಡ’ ಇಂದು ಒಂದು ಸಣ್ಣ ದಾಖಲೆಯ ಹೆಜ್ಜೆ ಇರಿಸಲು ಸಾಧ್ಯವಾಗಿದೆ. ಅಂದಹಾಗೆ, ಈ ಸಾಧನೆಗೆ ನಮಗೆ ಸ್ಪೂರ್ತಿದಾತರು, ಬೆನ್ನುಲುಬಾಗಿ ನಿಂತವರು, ಪ್ರತಿ ಹಂತದಲ್ಲೂ ಕೈ ಹಿಡಿದು ನಡೆಸಿದವರು, ತಪ್ಪಾದಾಗ ತಿದ್ದಿ, ಸರಿ ಇದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು, ನಮ್ಮ ಸುದ್ದಿಗಳಿಗೆ ಸದಾ ಬೆನ್ನೆಲುಬಾಗಿ ನಿಂತವರು ಬೇರಾರು ಅಲ್ಲ. ನೀವು ಮಾತ್ರ..! ಕೇವಲ ನೀವು ಮಾತ್ರ..!! ಈ ಕಾರಣಕ್ಕಾಗಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು.ನಿಮ್ಮ ಬೆಂಬಲ,ಪ್ರೀತಿ ತುಂಬಿದ ಆಶೀರ್ವಾದ ಸದಾ ಹೀಗೆ ಇರಲಿ. ಇದೇ ರೀತಿ ನಮ್ಮನ್ನ ಅಪ್ಪಿಕೊಳ್ಳಿ, ಒಪ್ಪಿಕೊಳ್ಳಿ ಎಂದು ಹೇಳುತ್ತಾ ನಿಮಗೆ ಧನ್ಯವಾದಗಳನ್ನು ಸಮರ್ಪಿಸುತ್ತಿರುವ ನಿಮ್ಮ ‘ ಜಸ್ಟ್ ಕನ್ನಡ’ ತಂಡ. : -----5 ---- : . 5 29, 2021 (..): . .. , , . 5 ( 02 29) . . ’ . . - 12 . . , , , , , . . . . : ./ / 50 /