ಸಂಸತ್ ನಲ್ಲಿ ವಿವಾದಿತ ಕೃಷಿಕಾಯ್ದೆಗಳು ವಾಪಸ್: ಲೋಕಸಭೆಯಲ್ಲಿ ವಿಪಕ್ಷಗಳಿಂದ ಭಾರಿ ಗದ್ಧಲ.. ನವದೆಹಲಿ,ನವೆಂಬರ್,29,2021(..):ರೈತರ ಹೋರಾಟಕ್ಕೆ ಮಣಿದು ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯುವುದಾಗಿ ಘೋಷಿಸಿದ್ಧ ಕೇಂದ್ರ ಸರ್ಕಾರ ಇದೀಗ ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಾಯ್ದೆಗಳನ್ನ ಹಿಂಪಡೆದಿದೆ. ಸಂಸತ್ ಅಧಿವೇಶನ ಆರಂಭವಾದ ಬಳಿಕ ಕೇಂದ್ರ ಕೃಷಿ ಸಚಿವ ತೋಮರ್ ವಿವಾದಿತ ಕೃಷಿ ತಿದ್ಧುಪಡಿ ಕಾಯ್ದೆಗಳನ್ನ ಹಿಂಪಡೆದರು. ಈ ವೇಳೆಯಲ್ಲಿ ವಿಪಕ್ಷಗಳಲ್ಲ ಲೋಕಸಭೆಯಲ್ಲಿ ಭಾರಿ ಗದ್ದಲವನ್ನುಂಟು ಮಾಡಿದ್ದು, ಕೃಷಿ ಕಾಯ್ದೆ ಕುರಿತು ಚರ್ಚೆಗೆ ಪಟ್ಟು ಹಿಡಿದರು. ಚರ್ಚೆ ನಡೆಸದೇ ಕೃಷಿ ಕಾಯ್ದೆ ಹಿಂಪಡೆಯುತ್ತಿರುವುದೇಕೆ.ಕಾಯ್ದೆಗಳನ್ನ ವಾಪಸ್ ಪಡೆಯುವ ಬಗ್ಗೆ ವಿವರಣೆ ನೀಡಲಿ ಎಂದು ವಿಪಕ್ಷಗಳು ಬಿಗಿಪಟ್ಟು ಹಿಡಿದವು. ಲೋಕಸಭೆಯಲ್ಲಿ ಭಾರಿ ಗದ್ಧಲ ಉಂಟಾದ ಹಿನ್ನೆಲೆ ಲೋಕಸಭೆ ಸ್ಪೀಕರ್ ಕಲಾಪವನ್ನ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. : - - – - … : , 29, 2021 (..): , . , , . , , , . . 2.00 .: / / /