ಉಡ್ ಲ್ಯಾಂಡ್ ಚಿತ್ರ ಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜತೆ ಸಿನಿಮಾ ವೀಕ್ಷೀಸಿದ ನಟ ಶಿವರಾಜ್ ಕುಮಾರ್. ಮೈಸೂರು,ನವೆಂಬರ್,26,2021(..): ನಟ ಶಿವರಾಜ್ ಕುಮಾರ್ ಇಂದು ಮೈಸೂರಿನ ಉಡ್ ಲ್ಯಾಂಡ್‌ ಸಿನಿಮಾ ಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜತೆ ಭಜರಂಗಿ-2 ಚಿತ್ರ ವೀಕ್ಷಿಸಿದರು. ಪುನೀತ್ ರಾಜ್ ಕುಮಾರ್ ಭಾವ ಚಿತ್ರಕ್ಕೆ ನಟ ಶಿವರಾಜ್ ಕುಮಾರ್ ಪುಷ್ಪಾನಮನ ಸಲ್ಲಿಸಿದರು. ಪುಷ್ಪಾರ್ಚನೆ ವೇಳೆ ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಾಗೂ ನಟ ಶಿವಣ್ಣನಿಗೆ ಅಭಿಮಾನಿಗಳು ಜೈಕಾರ ಕೂಗಿದರು. ನಂತರ ಅಭಿಮಾನಿಗಳ ಜೊತೆ ನಟ ಶಿವಣ್ಣ ಭಜರಂಗಿ 2 ಚಿತ್ರ ವೀಕ್ಷಿಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. : - - --- – .