ಅಪ್ಪು ಅಭಿಮಾನಿ: ಮೈಸೂರು ಟು ತಿರುಪತಿ ಪಾದಯಾತ್ರೆ..! ಮೈಸೂರು,ನವೆಂಬರ್,27,2021(..) : ನಟ ಪುನೀತ್ ರಾಜ್‍ ಕುಮಾರ್ ನಿಧನರಾಗಿ ತಿಂಗಳಾಗುತ್ತಿದ್ದು, ಈ ಮಧ್ಯೆ ಅಪ್ಪು ಅಭಿಮಾನಿಗಳು ವಿಶೇಷ ರೀತಿಯಲ್ಲಿ ತಮ್ಮ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಭಿಮಾನಿಯೊಬ್ಬರು ಬಾಗಲಕೋಟೆಯಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ನಡೆಸಿ ಪವರ್ ಸ್ಟಾರ್ ಗೆ ಅಂತಿಮ ನಮನ ಸಲ್ಲಿಸಿದ್ಧರು. ಅಂತೆಯೇ ಇದೀಗ ಮೈಸೂರಿನ ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಯುವರತ್ನನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹೌದು ಮೈಸೂರಿನ ಅಗ್ರಹಾರ ನಿವಾಸಿ ಮಸಾಜ್ ನಂದೀಶ್ ಎಂಬ ಅಭಿಮಾನಿ ಮೈಸೂರಿನಿಂದ ತಿರುಪತಿವರೆಗೆ ಸುಮಾರು 400ರಿಂದ 450 ಕಿ.ಮೀ ದೂರ ಪಾದಯಾತ್ರೆ ಮಾಡುವ ಮೂಲಕ ದೊಡ್ಮನೆ ಹುಡುಗನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ಧಾರೆ. ಬೆನ್ನ ಹಿಂದೆ ಅಪ್ಪು ಫೋಟೊ, ಕನ್ನಡದ ಭಾವುಟ ಹಿಡಿದು ಮೈಸೂರಿನಿಂದ ನವೆಂಬರ್ 19 ರಂದು ಪಾದಯಾತ್ರೆ ಆರಂಭಿಸಿ ಮಸಾಜ್ ನಂದೀಶ್ ಅವರು ಈ ಮೂಲಕ ಅಗಲಿದ ನಟನಿಗೆ ಗೌರವ ಸಲ್ಲಿಸಿದ್ದಾರೆ. ಅವರನ್ನ ‘ಜಸ್ಟ್ ಕನ್ನಡ ಡಾಟ್ ಇನ್’ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು.. ನಾವು ಲೋಕಕಲ್ಯಾಣಕ್ಕೋಸ್ಕರ ನಾಲ್ಕು ವರ್ಷಗಳಿಂದ ತಿರುಪತಿಗೆ ಪಾದಯಾತ್ರೆ ಮಾಡುತ್ತಿದ್ದೇವೆ, ನಾನು ಅಪ್ಪು ಅಭಿಮಾನಿ. ಎಲ್ಲರೂ ಎಲ್ಲಾ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗೆಯೇ ನಾನು ಈ ಭಾರಿ ವಿಶೇಷ ರೀತಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ನಾವು ಈ ರೀತಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಪಾದಯಾತ್ರೆ ಮೂಲಕ ತೆರಳುತ್ತಿದ್ದೇವೆ ಎಂದರು. ಹಾಗೆಯೇ ಪುನೀತ್ ರಾಜ್ ಕುಮಾರ್ ಅವರ ಹಿರಿಯರಿಗೆ ಗೌರವ ಕೊಡುವ ಗುಣ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಮತ್ತು ಅವರ ನಗು ಎಂದರೇ ತುಂಬಾ ಇಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಸಾಜ್ ನಂದೀಶ್ ತಿಳಿಸಿದರು. … ’ , 27, 2021 (..): , . , . . , ’ , . , , . 400 450 . . 19. . . “ ‘’. . . ,” .: / / / / : - - -- – .