ಪೊಲೀಸ್ ಠಾಣೆಗೆ ಸಂಗೀತ ನಿರ್ದೇಶಕ ಹಂಸಲೇಖ ಹಾಜರು. ಬೆಂಗಳೂರು,ನವೆಂಬರ್,25,2021(..):ಪೇಜಾವರಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ಅವರು ನಗರದ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಪೇಜಾವರಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಹಂಸಲೇಖ ಅವರ ವಿರುದ್ಧ ಭಕ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಹಂಸಲೇಖ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದರು. ಹೀಗಾಗಿ ಇಂದು ಹಂಸಲೇಖ ಅವರು ವಕೀಲರ ಜತೆ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಹಂಸಲೇಖ ಅವರ ಜತೆ ನಾನು ಬರುತ್ತೇನೆ ಎಂದು ನಟ ಚೇತನ್ ಪೋಸ್ಟ್ ಹಾಕಿದ್ದರು. ನಟ ಚೇತನ್ ಬಂದರೇ ಕಪ್ಪುಬಟ್ಟೆ ಪ್ರದರ್ಶನ ಮಾಡುವುದಾಗಿ ಬಜರಂಗದಳ ಕಾರ್ಯಕರ್ತರು ಹೇಳಿದ್ದರು. ಪೊಲೀಸ್ ಠಾಣೆ ಬಳಿ ಭದ್ರತೆ ವಹಿಸಲಾಗಿದೆ. ಹಂಸಲೇಖ ಅವರ ಹೇಳಿಕೆ ಪರ ಮತ್ತು ವಿರೋಧವಾಗಿ ಪ್ರತಿಭಟನೆ ನಡೆಯುತ್ತಿದೆ. : - - – .