ವಿದ್ಯುತ್ ತಂತಿ ತಗುಲಿ ರೈತ ಬಲಿ: ಜಮೀನು ಮಾಲೀಕನನ್ನು ಹೊಡೆದು ಕೊಂದ ಸ್ಥಳೀಯರು. ಚಿಕ್ಕಬಳ್ಳಾಪುರ.ನವೆಂಬರ್,25,2021(..):ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ರೈತ ಬಲಿಯಾದ ಹಿನ್ನೆಲೆ ರೊಚ್ಚಿಗೆದ್ಧ ಸ್ಥಳೀಯರು ಜಮೀನು ಮಾಲೀಕನನ್ನೆ ಹೊಡೆದು ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಚರಕಮಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಸಂತರಾವ್ ವಿದ್ಯುತ್ ಬೇಲಿಗೆ ಬಲಿಯಾದ ರೈತ. ವಸಂತರಾವ್ ಸಾವಿಗೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದೇ ಕಾರಣ ಎಂದು ಜಮೀನು ಮಾಲೀಕ ಅಶ್ವಥ್ ರಾವ್ ಅವರನ್ನ ಸ್ಥಳೀಯರು ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ರೈತ ವಸಂತರಾವ್ ವಿದ್ಯುತ್ ತಂತಿಗೆ ಬಲಿಯಾದ ಸುದ್ದಿ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಆ ವೇಳೆ ಜಮೀನು ಮಾಲೀಕ ಅಶ್ವತ್ಥ ರಾವ್ ಮೇಲೆ ಮಾರಣಾಂತಿಕವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅಶ್ವತ್ಥ ರಾವ್ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾಗಿ ಮೃತಪಟ್ಟ ಅಶ್ವತ್ಥ ರಾವ್ ತಮ್ಮ ಟೊಮ್ಯಾಟೊ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. : - –-- – .