ಎಲ್ಲಾ ಕಡೆ ಬಿಜೆಪಿ ವಾತಾವರಣ: ಕನಿಷ್ಠ 15 ಪರಿಷತ್ ಸ್ಥಾನಗಳನ್ನ ಗೆಲ್ತೇವೆ ಎಂದ ಮಾಜಿ ಸಿಎಂ ಬಿಎಸ್ ವೈ. ಶಿವಮೊಗ್ಗ,ನವೆಂಬರ್,24,2021(..):ಡಿಸೆಂಬರ್ 10 ರಂದು ನಡೆಯಲಿರುವ ರಾಜ್ಯ ವಿಧಾನಪರಿಷತ್ ಚುನಾವಣಾ ಕಣ ರಂಗೇರಿದ್ದು, ಮೂರು ಪಕ್ಷದ ರಾಜಕೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯಲಿದ್ದಾರೆ. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕಿಳಿಯಲಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿವಮೊಗ್ಗ, ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ. ತಾಲ್ಲೂಕು ಕೇಂದ್ರಗಳಲ್ಲಿ ನಮ್ಮ ಅಭ್ಯರ್ಥಿಪರ ಪ್ರಚಾರದಲ್ಲಿ ತೊಡಗುತ್ತೇನೆ. ನಾವು 20 ಅಭ್ಯರ್ಥಿಗಳನ್ನ ಹಾಕಿದ್ದೇವೆ. ಎಲ್ಲಾ ಕಡೆ ಬಿಜೆಪಿ ಪರ ವಾತಾವರಣವಿದ್ದು ಕನಿಷ್ಟ ಪಕ್ಷ 15 ಪರಿಷತ್ ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿನ್ನೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಡಿಸೆಂಬರ್ 10 ರಂದು ಮತದಾನ ನಡೆದು ಡಿಸೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. : – 15 –- - … : , 24, 2021 (..): 10. . .. . , .. . “ . 20 . . 15 ,” . . . 10, 14.: / / ..