ಬೆಂಗಳೂರಲ್ಲಿ ಅಪ್ಪು ಪುತ್ಥಳಿ ನಿರ್ಮಾಣ, ಶೀಘ್ರ ಅನಾವರಣ ಬೆಂಗಳೂರು, ನವೆಂಬರ್ 24, 2021 (..):ಬನಶಂಕರಿಯಲ್ಲಿರುವ ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ತ ಕೈಯಲ್ಲಿ ಅಪ್ಪು ಪುತ್ಥಳಿ ನಿರ್ಮಾಣವಾಗಿದೆ. ಶೀಘ್ರವೇ ಅದನ್ನು ಅನಾವರಣ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಪುನೀತ್​ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಫೈನಲ್‌ ಟಚ್ ನೀಡುವ ಕಾರ್ಯ ಆರಂಭಗೊಂಡಿದೆ. ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿ ಹಲವು ದಿನಗಳು ಕಳೆದಿವೆ. ಅವರ ಸಮಾಧಿಗೆ ಈಗಲೂ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಲೇ ಇದ್ದಾರೆ. ಪುನೀತ್​ ಅವರನ್ನು ನೆನಪು ಮಾಡಿಕೊಳ್ಳೋಕೆ ನಾನಾ ಕೆಲಸಗಳು ಕೂಡ ನಡೆಯುತ್ತಿವೆ. ರಸ್ತೆ, ಪಾರ್ಕ್​​ಗಳಿಗೆ ಅವರ ಹೆಸರನ್ನು ಇಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.