ಎಸಿಬಿ ದಾಳಿ: ಕೃಷಿ ಇಲಾಖೆ ಜಂಟಿ ನಿರ್ದೇಶಕನ ನಿವಾಸದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆ. ಶಿವಮೊಗ್ಗ,ನವೆಂಬರ್,24,2021(..): ಇಂದು ಬೆಳ್ಳಂಬೆಳಿಗ್ಗೆಯೇ ಎಸಿಬಿ ಅಧಿಕಾರಿಗಳು ರಾಜ್ಯದ 15 ಅಧಿಕಾರಿಗಳಿಗೆ ಸೇರಿದ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಒಟ್ಟು 68 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು ದಾಖಲೆ ಪರಿಶಿಲನೆ ನಡೆಸುತ್ತಿದ್ದಾರೆ. ಈ ಮಧ್ಯೆ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ. ಶಿವಮೊಗ್ಗದ ಚಾಲುಕ್ಯನಗರದಲ್ಲಿರುವ ರುದ್ರೇಶಪ್ಪ ಅವರ ನಿವಾಸದಲ್ಲಿ 7 ಕೆ.ಜಿ ಚಿನ್ನಾಭರಣ 15 ಲಕ್ಷ ರೂ. ನಗದು ಪತ್ತೆಯಾಗಿದೆ ಎಂಬಮ ಮಾಹಿತಿ ಲಭ್ಯವಾಗಿದೆ. ಮೂರುವರೆ ಕೋಟಿ ರೂ ಬೆಲೆಬಾಳುವ ಚಿನ್ನಾಭರಣವಾಗಿದೆ. ಚಿನ್ನಾಭರಣವನ್ನ ಎಸಿಬಿ ತಂಡ ಬಾಕ್ಸ್ ಗಳಲ್ಲಿ ಸಂಗ್ರಹಿಸಿದ್ದು ಪರಿಶೀಲನೆ ಮುಂದುವರೆದಿದೆ. : –- - - – – –