ನಾಳೆಯಿಂದ ಯುಜಿಸಿ-ಸಿಇಸಿ ಶೈಕ್ಷಣಿಕ ವಿಡಿಯೋ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ-ಪ್ರೊ. ಮೈಸೂರು ವಿವಿ ಕುಲಪತಿ ಪ್ರೊ. ಜಿ ಹೇಮಂತ್ ಕುಮಾರ್. ಮೈಸೂರು,ನವೆಂಬರ್,23,2021(..):ನವೆಂಬರ್ 24 ರಿಂದ 23 ನೇ ಯುಜಿಸಿ-ಸಿಇಸಿ ಶೈಕ್ಷಣಿಕ ವಿಡಿಯೋ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪ್ರಕೃತಿ ಅಂತರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು. ಮೈಸೂರಿನ‌ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಸಮಾರಂಭದ ಕುರಿತು ಮಾಹಿತಿ ನೀಡಿದ ಕುಲಪತಿ ಪ್ರೊ. ಜಿ ಹೇಮಂತ್ ಕುಮಾರ್, ನವೆಂಬರ್ 24 ರಿಂದ 27 ರವರೆಗೆ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭ ಕ್ರಾಫರ್ಡ್ ಭವನದಲ್ಲಿ ಜರುಗಲಿದ್ದು, ಸಿಇಸಿ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿದ ಶಾರ್ಟ್ ಮೂವಿ ಪ್ರದರ್ಶನ ನಡೆಯಲಿದೆ. ಅತ್ಯುತ್ತಮ ಚಿತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರೊ.ಹೇಮಂತ್ ಕುಮಾರ್ ತಿಳಿಸಿದರು. : - - - - -- . …. - . 24: , , 23, 2021 (..): . . , -, , - - , 24 27. , , . . . , .: / - / / 24