ನಾಳೆಯಿಂದ ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಚಾಲನೆ. ಮೈಸೂರು, ನ.23, 2021 : (.. ) ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ನಾಳೆಯಿಂದ (ನ.24ರಿಂದ) ನ. 27ರ ವರೆಗೆ ಶೈಕ್ಷಣಿಕ ವಿಡಿಯೊ ಸ್ಪರ್ಧೆ ವಿಜೇತ ಚಿತ್ರಗಳ ಪ್ರದರ್ಶನ, ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ ಆಯೋಜಿಸಲಾಗಿದೆ. ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗ (ಯುಜಿಸಿ) ಮತ್ತು ಶೈಕ್ಷಣಿಕ ಸಂವಹನ ಒಕ್ಕೂಟ (ಸಿಇಸಿ) ಜಂಟಿಯಾಗಿ ಆಯೋಜಿಸಿರುವ ಈ ಸಾಕ್ಷ್ಯಚಿತ್ರೋತ್ಸವವನ್ನು ಬುಧವಾರ ಬೆಳಗ್ಗೆ 11 ಗಂಟೆಗೆ ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಉದ್ಘಾಟಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಹಾಗೂ ಸಿಇಸಿ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಮಾಹಿತಿ ಹೀಗಿದೆ… : ------