ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಲ್ಯಾಬ್ ಮಷಿನ್​ ಗಳು ಮತ್ತು ಸ್ಯಾಂಪಲ್ಸ್ ಗಳು ಹಾಳು: ಸಿಎಂ ಪರಿಶೀಲನೆ. ಬೆಂಗಳೂರು,ನವೆಂಬರ್,23,2021(..):ಭಾರಿ ಮಳೆಯಿಂದಾಗಿ ನಗರದ ಜಕ್ಕೂರಿನಲ್ಲಿರುವ ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿದ್ದು ಅಪಾರ ಬೆಲೆ ಬಾಳುವಲ್ಯಾಬ್ ಮಷಿನ್​ ಗಳು ಮತ್ತು ಸ್ಯಾಂಪಲ್ಸ್ ಗಳಿಗೆ ಹಾನಿಯುಂಟಾಗಿದೆ. ನೆಹರು ಸಂಶೋಧನಾ ಕೇಂದ್ರ ವಿಶ್ವದಲ್ಲೇ ಉನ್ನತ ಸಂಶೋಧನಾ ಕೇಂದ್ರವಾಗಿತ್ತು. ಈ ಸಂಶೋಧನಾ ಕೇಂದ್ರದಲ್ಲಿ ಹತ್ತರಿಂದ ಹದಿನೈದು ವರ್ಷದಿಂದ ಸ್ಯಾಪಂಲ್ಸ್ ಸಂಗ್ರಹಿಸಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಲ್ಯಾಬ್ ​ಗೆ ನೀರು ನುಗ್ಗಿ ಎಲ್ಲವೂ ಹಾಳಾಗಿದೆ. ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ್ದ ಮಾನವನನ ಸ್ಯಾಂಪಲ್ಸ್ ಹಾಳಾಗಿದೆ. ಹೆಚ್​ಐವಿ, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ 15 ವರ್ಷಕ್ಕೂ ಹಳೆಯದಾದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಆದರೆ ಎಲ್ಲವೂ ನೀರು ಪಾಲಾಗಿದೆ. ಪ್ರಮುಖ ಕಾಯಿಲೆಗಳ ಬಗ್ಗೆ ಈ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮಾಡಲಾಗುತ್ತಿತ್ತು. ಹೀಗಾಗಿ ದೇಶದ ಹಲವು ಭಾಗಗಳಿಂದ ಸ್ಯಾಂಪಲ್ಸ್ ಸಂಗ್ರಹಿಸಿಡಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆಯಿಂದಾಗಿ ಕ್ಯಾಂಪಸ್ ​ನಲ್ಲಿ ನೀರು ತುಂಬಿದ್ದು, ಕ್ಯಾಂಪಸ್​ನಲ್ಲಿ ಪವರ್ ಸಪ್ಲೈ ಕಡಿತ ಮಾಡಲಾಗಿದೆ. ಇದರಿಂದ ಕೆಲವೂ ಲ್ಯಾಬ್ ​ಗಳಿಗೂ ಪವರ್ ಸಪ್ಲೈ ನಿಂತಿದೆ. ಹೀಗಾಗಿ ಪ್ರಮುಖ ಸ್ಯಾಪಂಲ್ಸ್ ಹಾಳಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜೆಎನ್ ಸಿಎಎಸ್ ಆರ್ ಕ್ಯಾಂಪಸ್ ಗೆ ಅಪಾರ ಹಾನಿಯುಂಟಾಗಿದೆ. ಎರಡು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ಧೆ. ಆಗಲೇ ಚರಂಡಿ ನೀರು ಹರಿಯದ ಬಗ್ಗೆ ಮಾಹಿತಿ ಇತ್ತು. ಈ ಭಾಗಗಳಲ್ಲಿನ ಕೆರೆಗಳು 8 ಅಡಿ ಮಾತ್ರ ಇದೆ. ಈ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುವುದಿಲ್ಲ. ಕ್ಯಾಂಪಸ್ ನಲ್ಲಿ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ಇದನ್ನ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಕ್ಯಾಂಪಸ್ ಗೆ ನೀರು ನುಗ್ಗದಂತೆ ತಡೆಯಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು. : - - –- – … : , 23, 2021 (..): , , . . 10-15 . , . , , , , . , , , , , 15 . . . , , . , , . . , . “ . . 8 . . . . ,” .: / / / / /