ಆಂಧ್ರದ ಮೂರು ರಾಜಧಾನಿಗಳ ಬಿಲ್ ಹಿಂಪಡೆದ ಸಿಎಂ ಜಗನ್ ಸರ್ಕಾರ. ಹೈದ್ರಬಾದ್‌,ನವೆಂಬರ್,22,2021(..):ಆಂಧ್ರದ ಪ್ರದೇಶದ ಮೂರು ರಾಜಧಾನಿ ಬಿಲ್ ಅನ್ನು ಆಂದ್ರ ಸಚಿವ ಸಂಪುಟ ಹಿಂಪಡೆಯಲು ನಿರ್ಧರಿಸಿದೆ. ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸಿಎಂ ಜಗನ್ ಮೂರು ರಾಜಧಾನಿ ಬಿಲ್ ವಾಪಸ್ ಪಡೆದಿದ್ದಾರೆ. ಈ ಕುರಿತು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ಕಾನೂನು ರದ್ದತಿ ಕುರಿತು ಜಗನ್ ವಿಧಾನಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಎಜಿ ತಿಳಿಸಿದ್ದಾರೆ.ವಿಕೇಂದ್ರೀಕರಣ ಮತ್ತು ಸಿಆರ್ ಡಿಎ ರದ್ದತಿ ಮಸೂದೆಯನ್ನು ಸಚಿವ ಸಂಪುಟ ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಇಂದು ಕ್ಯಾಬಿನೆಟ್‌ ಸಭೆ ನಡೆಯಲಾಗುತ್ತಿದ್ದು, ಮುಖ್ಯಮಂತ್ರಿ ಜಗನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. : - - - - – ’- .