ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ : ಈ ವರ್ಷದಿಂದಲೇ ಇಂಜಿನಿಯರಿಂಗ್ ಕಾಲೇಜು ಪ್ರವೇಶಾತಿ ಆರಂಭಿಸಿದ ಮೈಸೂರು ವಿವಿ –E283 ಮೈಸೂರು, ನವೆಂಬರ್ ೨೧, ೨೦೨೧ (..): ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಬಹುದಿನಗಳ ಕನಸು ಇದೀಗ ನನಸಾಗಿದೆ. ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಅನುಮತಿ ದೊರೆತ ಬೆನ್ನಲ್ಲೇ ಇದೀಗ ಈ ಸಾಲಿನಿಂದಲೇ ಪ್ರವೇಶಾತಿ ಪ್ರಕ್ರಿಯೆ ಸಹ ಆರಂಭಗೊಂಡಿದೆ. ಆ ಮೂಲಕ ಮೈಸೂರು ಭಾಗದ ವಿದ್ಯಾರ್ಥಿಗಳಿಗೆ ಸುವರ್ಣವಕಾಶ. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ದೇಶದಾದ್ಯಂತ ಇರುವಂತಹ ವಿಶ್ವವಿದ್ಯಾಲಯಗಳಲ್ಲಿ ಮುಖ್ಯವಾಗಿ ಬಹುಶಿಸ್ತಿನ ಅಧ್ಯಯನಗಳನ್ನು ಪರಿಚಯಸಲು, ಅವುಗಳ ಮೇಲೆ ಏಕಾಗ್ರತೆ ವಹಿಸಲು ಹಾಗೂ ಪ್ರಚಾರ ಮಾಡುವ ಕಡೆ ಗಮನಕೇಂದ್ರೀಕರಿಸಿದೆ. ಮೈಸೂರು ವಿಶ್ವವಿದ್ಯಾಲಯವೂ ಸಹ ಎನ್ಇಪಿ-೨೦೨೦ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವನ್ನು ಅನುಸರಿಸಿದೆ. ಈ ಹಿನ್ನೆಲೆಯಲ್ಲಿ ಹಾಗೂ ವ್ಯಾಪ್ತಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿವಿಧ ಅಂತರ್ಶಿಸ್ತುಬದ್ಧ ಮಿಶ್ರ ಕೈಗಾರಿಕಾಚಾಲಿತ ಕೋರ್ಸುಗಳನ್ನು ಒದಗಿಸುತ್ತಿದೆ. ಹಾಲಿ ಬೋಧಕ ಸಿಬ್ಬಂದಿಗಳ ಜೊತೆಗೆ ಶೈಕ್ಷಣಿಕ ಹಾಗೂ ಸಿಂಡಿಕೇಟ್ನಲ್ಲಿ ಅನುಮೋದಿಸಿದಂತೆ ಹೊಸ ಇಂಜಿನಿಯರಿಂಗ್ ಸಿಬ್ಬಂದಿಗಳನ್ನು ವಿಶ್ವವಿದ್ಯಾಲಯ ಸೃಷ್ಟಿಸಿದೆ. ‘ ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್ ‘ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಪೈಕಿ ಸಂಪೂರ್ಣವಾಗಿ ಸ್ವ-ಹಣಕಾಸು ಯೋಜನೆಯುಳ್ಳ ಮೊದಲ ಸಮಗ್ರ ಸಂಸ್ಥೆಯಾಗಿದೆ. ಎಐಸಿಟಿಇ ( ), ನವ ದೆಹಲಿ ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಈ ಕೆಳಕಂಡ ಐದು ಕೋರ್ಸುಗಳನ್ನು ಅನುಮೋದಿಸಲಾಗಿದೆ. * ಕೃತಕ ಬುದ್ದಿಮತೆ ಹಾಗೂ ಯಾಂತ್ರಿಕ ಕಲಿಕೆ (ಎಐ&ಎಂಎಲ್)-೬೦ ಸೀಟುಗಳು* ಕೃತಕ ಬುದ್ದಿಮತೆ ಹಾಗೂ ಡಾಟಾ ಸೈನ್ಸ್ (ಎಐ&ಡಿಎಸ್)- ೬೦ ಸೀಟುಗಳು* ಸಿವಿಲ್ ಇನ್ವಿರಾನ್ಮೆಂಟಲ್ ಇಂಜಿನಿಯರಿಂಗ್ (ಸಿಇ)-೬೦ ಸೀಟುಗಳು* ಕಂಪ್ಯೂಟರ್ ಸೈನ್ಸ್ ಹಾಗೂ ಡಿಸೈನ್ (ಸಿಎಸ್&ಡಿ)-೬೦ ಸೀಟುಗಳು* ಬಯೊಮೆಡಿಕಲ್ ಹಾಗೂ ರೊಬೊಟಿಕ್ ಇಂಜಿನಿಯರಿಂಗ್ (ಬಿಎಂ&ಆರ್ಇ)-೬೦ ಸೀಟುಗಳು ಎಐಸಿಟಿಇ ಶಿಫಾರಸ್ಸಿನ ಪ್ರಕಾರ ಪ್ರತಿ ಕೋರ್ಸ್ಗೆ ೬೦ ಸೀಟುಗಳಿಗೆ ಸೀಮಿತಗೊಳಿಸಲಾಗಿದೆ ೧) ಕೆಇಎ ವತಿಯಿಂದ ಎಲ್ಲಾ ವಿಭಾಗಗಳಲ್ಲಿಯೂ ಶೇ.೫೦ ಸೀಟುಗಳನ್ನು ತುಂಬಿಸಲಾಗುವುದು @ ರೂ ೫೦,೮೦೮ ಶುಲ್ಕದೊಂದಿಗೆ೨) ಪ್ರತಿ ಕೋರ್ಸ್ನಲ್ಲಿ ಉಳಿದ ಶೇ.೫೦ ಸೀಟುಗಳನ್ನು ಸ್ವಯಂ ಹಣಕಾಸು ವ್ಯವಸ್ಥೆ ಸೀಟುಗಳಿಗೆ ಒದಗಿಸಲಾಗುವುದು – ರೂ. ೧,೫೫,೦೦೦ ಶುಲ್ಕದೊಂದಿಗೆ. : - -- : – 2020 , - . -2020. . . - . ( ) .) ( & ) – 60 ) ( & ) – – 60 ) () – – 60 ) ( & ) – – 60 ) ( & ) – – 60 60 .1) 50 ( ) @ . 58,808 Structure2) 50 @ . 1,55,000/- –E283