ಮಳೆಯಿಂದ 5 ಲಕ್ಷ ಹೆಕ್ಟೇರ್ ಬೆಳೆ ನಾಶ: ಸಂಪುರ್ಣ ಮನೆ ಕಳೆದುಕೊಂಡರಿಗೆ 1 ಲಕ್ಷ ರೂ. ಪರಿಹಾರ –ಸಿಎಂ ಬೊಮ್ಮಾಯಿ. ಬೆಂಗಳೂರು,ನವೆಂಬರ್ 22,2021(..):ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ 5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಮಳೆ ಹಾನಿ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಳೆಯಿಂದಾಗಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ ಪರಿಹಾರ, ಹಾಗಯೇ ಭಾಗಶಃ ಮನೆ ಕಳೆದುಕೊಂಡವರಿಗೂ ಪರಿಹಾರ ನೀಡಲಾಗುತ್ತದೆ. ರಸ್ತೆ ದುರಸ್ತಿಗೆ 500 ಕೋಟಿ ರೂ ಬಿಡುಗಡೆ ಮಾಡಲಾಗುತ್ತದೆ. ಇಲಾಖೆ ಸಚಿವರು ನೆರೆ ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದರು. ಸಿಎಂ ಜಿಲ್ಲಾ ಪ್ರವಾಸಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದ್ದು, ಇಂದಿನಿಂದ ತ್ವರಿತಗತಿಯಲ್ಲಿ ನೆರೆ ಪರಿಶೀಲನೆ ಮಾಡಲಾಗುತ್ತದೆ. ನೆರೆ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : 5 - - - – -1 - - –- . … 5 : . 1 , 22, 2021 (..): 10-15 . , . 1 . “ . . 500 . ,” ., ’ . “ . - ,” .: / / / /