ಪಠ್ಯ ಕ್ರಮ ಪೂರ್ಣಗೊಳಿಸಲು ಕಾಲಾವಕಾಶ: ಈ ಬಾರಿಯೂ ಎಸ್‌ಎಸ್‌ಎಲ್’ಸಿ ಪರೀಕ್ಷೆ ವಿಳಂಬ ಸಾಧ್ಯತೆ ಬೆಂಗಳೂರು, ಅಕ್ಟೋಬರ್ 21, 2021 (..):ಈ ಬಾರಿಯೂ ಎಸ್‌ಎಸ್‌ಎಲ್ ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ. ಶೈಕ್ಷಣಿಕ ಅವಧಿ ವಿಳಂಬ ಮತ್ತು ಪಠ್ಯ ಕ್ರಮ ಪೂರ್ಣಗೊಳಿಸಲು ಕಾಲವಕಾಶದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮೇ ಜೂನ್ ವೇಳೆಗೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಾರಿ ನವೆಂಬರ್ ಮುಗಿಯುತ್ತಿದ್ದರೂ ಪರೀಕ್ಷೆ ದಿನಾಂಕ ನಿಗದಿ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಈ ಬಾರಿಯೂ ಎಸ್‌ಎಸ್‌ಎಲ್ ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಿಂದ ಏಪ್ರಿಲ್ ಮೊದಲ ವಾರದೊಳಗೆ ಎಸ್‌ಎಸ್‌ಎಲ್ ಸಿ ಪರೀಕ್ಷೆ ಮುಗಿಯುತ್ತಿತ್ತು. ಆದರೆ ಈ ಬಾರಿ ವಿಳಂಬವಾಗುವುದು ನಿಚ್ಚಳವಾಗಿದೆ.