ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು: ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು,ಜೂನ್,26,2024 (..):ಹಾಲಿನ ದರ 2 ರೂ ಹೆಚ್ಚಳ ಮಾಡಿರುವುದನ್ನ ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಸಿಕೊಂಡಿದ್ದು ಅಲ್ಲದೆ ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು ಎಂದು ಹೇಳಿಕೆ ನೀಡಿದ್ದಾರೆ. ಹಾಲಿನ ದರ ಏರಿಕೆಗೆ ಬಿಜೆಪಿ ಮತ್ತು ರಾಜ್ಯದ ಜನತೆ ವಿರೋಧ ವ್ಯಕ್ತಪಡಿಸಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿಯವರು ರೈತ ವಿರೋಧಿಗಳು. ಜಾಸ್ತಿಯಾಗಿರುವ 2 ರೂ ರೈತರಿಗೆ ತಲುಪುತ್ತೆ ರೈತರಿಗೆ ಹಣ ತಲುಪಲ್ಲ ಅನ್ನೋದನ್ನ ಯಾರು ಹೇಳಿದ್ರು? ಕೆಎಂಎಫ್ ಉಳಿದರೇ ರೈತರು ಉಳಿದಂತೆ ಎಂದಿದ್ದಾರೆ. ರೈತರು ಸಾಲದಿಂದ ಹಸುಗಳನ್ನ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿಯವರ ರೈತ ವಿರೋಧಿ ಧೋರಣೆ ಎದ್ದು ಕಾಣುತ್ತೆ ಬೇರ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನೋಡಲಿ. ಅ ಮೇಲೆ ಮಾತನಾಡಲಿ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು. ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು. ಕೆಎಂಎಫ್ ಅಂದರೆ ರೈತರ ಒಕ್ಕೂಟ, ನನ್ನ ಪ್ರಕಾರ ಇನ್ನೂ ಹಾಲಿನ‌ ದರ ಜಾಸ್ತಿ ಮಾಡಬೇಕು. ಯಾರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ ಎಂದು ಹೇಳಿದರು. : , , ,