ನಮ್ಮ ಹೋರಾಟ ಹಿಂಪಡೆಯುವುದಿಲ್ಲ- ರೈತನಾಯಕ ರಾಕೇಶ್ ಟಿಕಾಯಿತ್ ಹೀಗೆ ಹೇಳಿದ್ದೇಕೆ..? ನವದೆಹಲಿ,ನವೆಂಬರ್,19,2021(..):ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರು ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಜಗ್ಗದ ರೈತ ನಾಯಕ ರಾಕೇಶ್ ಟಿಕಾಯತ್ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದಿದ್ದಾರೆ. ಹೌದು, ಸಂಸತ್ ನಲ್ಲಿ ಕಾಯ್ದೆಗಳನ್ನ ರದ್ದುಪಡಿಸಬೇಕು. ಸಂಸತ್ ನಲ್ಲಿ ಕಾಯ್ದೆ ರದ್ದುಪಡಿಸುವ ದಿನಕ್ಕೆ ಕಾಯುತ್ತಿದ್ದೇವೆ. ಎಂಎಸ್ ಪಿ ಬಗ್ಗೆ ನಿರ್ಧಾರ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರ ರೈತರ ಇತರ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಚರ್ಚಿಸಬೇಕು ಎಂದು ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ. : –- - - -