ಕಾಂಗ್ರೆಸ್ ಎಂಎಲ್ ಸಿ ಟಿಕೆಟ್ ಪಡೆಯಲು 15 ಕೋಟಿ ರೂ. ಹಣ ಇರಬೇಕು- ಹೊಸಬಾಂಬ್ ಸಿಡಿಸಿದ ಎಂಎಲ್ ಸಿ ಹೆಚ್.ವಿಶ್ವನಾಥ್. ಮೈಸೂರು,ನವೆಂಬರ್,17,2021(..):ರಾಜ್ಯ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು ಮೂರು ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ಮಧ್ಯೆ ಕಾಂಗ್ರೆಸ್ ಎಂಎಲ್ ಸಿ ಟಿಕೆಟ್ ಪಡೆಯಲು 15 ಕೋಟಿ ರೂ. ಇರಬೇಕು ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಹೊಸಬಾಂಬ್ ಸಿಡಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಕಾಂಗ್ರೆಸ್ ಎಂಎಲ್ ಸಿ ಟಿಕೆಟ್ ಪಡೆಯಲು 15 ಕೋಟಿ ಬೇಕು. ಎಂಎಲ್ ಸಿ ಟಿಕೆಟ್ ಕೇಳಿದವರಿಗೆ ಡಿಕೆ ಶಿವಕುಮಾರ್ ಹೇಳಿದ್ದಾರೆ. 15 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು ಎಂದಿದ್ದಾರೆ. ಜೊತೆಗೆ 1 ಲಕ್ಷ ರೂಪಾಯಿ 1 ಲಕ್ಷ ರೂ. ನಾನ್ ರಿಟರ್ನೇಬಲ್ ಫಂಡ್ ನೀಡಬೇಕು ಎಂದು ತಿಳಿಸಿದ್ದಾರೆ. ಹೀಗಾದರೇ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತೆ ಹೇಳಿ. ಕಾಂಗ್ರೆಸ್ ನಲ್ಲೂ ಸಾಮಾಜಿಕ ನ್ಯಾಯ ದೂರವಾಗುತ್ತಿದೆ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು. : –- –-15 - - . - - . … “ .15 . . : . , November17, 2021 (..): , . , . . 15 ! , .. . 15 . “ , . 1 - ,” .“ . ,” .: / . / .15 /