ಸಿನಿ ಪ್ರಿಯರಿಗೆ ಓಟಿಟಿಯಲ್ಲಿ ‘ರಿಲೀಸ್ ಹಬ್ಬ’: ಇಂದು ಬಿಡುಗಡೆಯಾಗುತ್ತಿವೆ ಸಾಲು ಸಾಲು ಸಿನಿಮಾ, ಸಿರೀಸ್ ಬೆಂಗಳೂರು, ನವೆಂಬರ್ 18, 2021 (..):ಈ ವಾರ ಆಮೆಜಾನ್ ಪ್ರೈಮ್, ನೆಟ್​​ಫ್ಲಿಕ್ಸ್, ಆಹಾ, ಡಿಸ್ನೆ+ ಹಾಟ್​​ಸ್ಟಾರ್ ಮೊದಲಾದ ಒಟಿಟಿಗಳ ಮುಖಾಂತರ ಹಲವು ಚಿತ್ರಗಳು, ಸೀರೀಸ್ ತೆರೆಕಾಣುತ್ತಿವೆ. ಪೂಜಾ ಹೆಗ್ಡೆ ಹಾಗೂ ಅಖಿಲ್ ಅಕ್ಕಿನೇನಿ ಅಭಿನಯದ ಈ ಚಿತ್ರ ನವೆಂಬರ್ 19ರಂದು ಆಹಾ ಒಟಿಟಿ ಹಾಗೂ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾಗಲಿದೆ. ತೇಜ ಸಜ್ಜ ಮತ್ತು ಶಿವಾನಿ ರಾಜಶೇಖರ್ ಅಭಿನಯದ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ. ಡಿಸ್ನೆ+ ಹಾಟ್​​ಸ್ಟಾರ್​​ನಲ್ಲಿ ಈ ಚಿತ್ರ ತೆರೆಕಾಣಲಿದೆ. ಕಾರ್ತಿಕ್ ಆರ್ಯನ್ ನಟನೆಯ ಈ ಬಾಲಿವುಡ್ ಚಿತ್ರ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ. ಥ್ರಿಲ್ಲರ್ ಮಾದರಿಯ ಈ ಚಿತ್ರ ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಆಮೆಜಾನ್ ಒರಿಜಿನಲ್ ಸೀರೀಸ್ ಆದ ‘ದಿ ವೀಲ್ ಆಫ್ ಟೈಮ್’ ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಇನ್ನು‘ಯುವರ್ ಹೋಮರ್ ಸೀಸನ್ 2 ಸೀರೀಸ್ ಸೋನಿ ಲಿವ್​ನಲ್ಲಿ ಬಿಡುಗಡೆಯಾಗಲಿದೆ.