ಕೋವಿಡ್ ಲಸಿಕೆ ಪಡೆಯಲು ಹಿಂದೇಟು: ಮಹತ್ವದ ಕ್ರಮಕ್ಕೆ ಮುಂದಾದ ಸರ್ಕಾರ..? ಬೆಂಗಳೂರು,ನವೆಂಬರ್,18,2021(..):ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದು ಹೀಗಾಗಿ ಕೊವೀಡ್ ಲಸಿಕೆ ಬಗ್ಗೆ ಜನರಲ್ಲಿ ತಾತ್ಸಾರ ಮೂಡಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದು, ಇದೀಗ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಕರೋನ ಕೇಸ್ ಕಡಿಮೆಯಾದ ಬಳಿಕ ಜನತೆ ಎರಡನೇ ಡೋಸ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದು ಆರೋಗ್ಯ ಇಲಾಖೆ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ಹೀಗಾಗಿ ಇನ್ಮುಂದೆ ನೀವು ಮನೆಯಿಂದ ಹೊರಗೆ ಬರಲು ಎರಡು ಡೋಸ್‌ ಕರೋನ ವ್ಯಾಕ್ಸಿನ್‌ ಪಡೆದುವರಿಗೆ ಮಾತ್ರ ಅವಕಾಶ ನೀಡುವುದರ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ವ್ಯಾಕ್ಸಿನ್‌ ಎರಡು ಡೋಸ್‌ ಪಡೆದವರು ಮಾತ್ರ ಹೊರ ಬರುವುದರ ಕುರಿತು ಈಗಾಗಲೇ ವಿದೇಶದಲ್ಲಿ ತೀರ್ಮಾನವನ್ನು ತೆಗದುಕೊಳ್ಳಲಾಗಿದೆ. ಈ ಬಗ್ಗೆ ರಾಜ್ಯದಲ್ಲೂ ಕೂಡ ತಜ್ಞರ ಸಮಿತಿ ಸರ್ಕಾರದ ಮುಂದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಬೆಂಗಳೂರಿನ 1 ಕೋಟಿ ಜನರ ಪೈಕಿ ಕೇವಲ 40 ಲಕ್ಷ ಮಂದಿ ಮಾತ್ರ ಎರಡು ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದ್ರೆ ಎರಡೂ ಡೋಸ್‌ ಪಡೆದವರು ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶವಿರುತ್ತದೆ. : - -- … : . …?, 18, 2021 (..): -19 , . , . . , ! , . , . , 40 , . . , .: / -19 / / ?