ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ: ಮೈಸೂರು ಜಿಲ್ಲೆಯಲ್ಲಿ 11 ಕಂಟ್ರೋಲ್ ರೂಂ ಸ್ಥಾಪನೆ. ಮೈಸೂರು,ನವೆಂಬರ್,18,2021(..):ರಾಜ್ಯದಲ್ಲಿನ ವಿಧಾನಪರಿಷತ್ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಚುನಾವಣೆ ಕಾರ್ಯ ಚಟುವಟಿಕೆಗೆ ಜಿಲ್ಲಾಡಳಿತ ಸಿದ್ದತೆ ನಡೆಸಿದ್ದು ಜಿಲ್ಲೆಯಲ್ಲಿ ಒಟ್ಟು 11 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ರಾಜ್ಯದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಮತದಾನ ನಡೆಯಲಿದೆ. ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಮೈಸೂರು ಜಿಲ್ಲೆಯಲ್ಲಿ 11 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಕಂಟ್ರೋಲ್ ರೂಂಗೆ ತಿಳಿಸುವಂತೆ ಮನವಿ ಮಾಡಲಾಗಿದೆ. ಈ ಕುರಿತು ಎಡಿಸಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 1077 ಆಗಿದ್ದು, ಮೈಸೂರು ಉಪವಿಭಾಗಾಧಿಕಾರಿಗಳ ಕಚೇರಿಯ ದೂ.ಸಂ.0821-2422100, ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿಯ ದೂ.ಸಂ.08222-252073, ಮೈಸೂರು ಪಾಲಿಕೆಯ ದೂ.ಸಂ.9449841195/9449841196, ಪಿರಿಯಾಪಟ್ಟಣ ತಾಲ್ಲೂಕು ಕಚೇರಿಯ ದೂ.ಸಂ.08223-274175. ಕೆ.ಆರ್.ನಗರ ತಾಲ್ಲೂಕು ಕಚೇರಿಯ ದೂ.ಸಂ.08223-262371. ಹುಣಸೂರು ತಾಲ್ಲೂಕು ಕಚೇರಿಯ ದೂ.ಸಂ. 08222-252040. ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿಯ ದೂ.ಸಂ. 08228-255325. ನಂಜನಗೂಡು ತಾಲ್ಲೂಕು ಕಚೇರಿಯ ದೂ.ಸಂ.08221-223108. ಮೈಸೂರು ತಾಲ್ಲೂಕು ಕಚೇರಿಯ ದೂ.ಸಂ.0821-2414812. ಟಿ.ನರಸೀಪುರ ತಾಲ್ಲೂಕು ಕಚೇರಿಯ ದೂ.ಸಂ. 08227-260210, 261233 ಆಗಿದೆ. ಚುನಾವಣೆ ಸಂಬಂಧ ದೂರು ಹಾಗೂ ಮಾಹಿತಿಗಾಗಿ ಕಂಟ್ರೋಲ್ ಕರೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. : -11 – … : 11 , 18, 2021 (..): 11 . 25 10. 11 . . , . .. , , : . ’ 1077, ’ (082102422100), ’ (08222-252073), (9449841195/ 9449841196).: / /