ಪೌರ ಕಾರ್ಮಿಕನ ಮೇಲೆ ಹಲ್ಲೆ: ಸಂಜೆಯೊಳಗೆ ಆರೋಪಿಗಳನ್ನ ಬಂಧಿಸುವಂತೆ ಎಸ್ಪಿಗೆ ಸಚಿವ ಕೆ.ಎಸ್ ಈಶ್ವರಪ್ಪ ಖಡಕ್ ಸೂಚನೆ. ಶಿವಮೊಗ್ಗ,ನವೆಂಬರ್,17,2021(..):ಶಿವಮೊಗ್ಗದಲ್ಲಿ ಪೌರಕಾರ್ಮಿಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಸಂಜೆಯೊಳಗೆ ಆರೋಪಿಗಳನ್ನ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಖಡಕ್ ಸೂಚನೆ ನೀಡಿದರು. ಹಲ್ಲೆಯಿಂದ ಗಾಯಗೊಂಡು ಪೌರಕಾರ್ಮಿಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಪೌರಕಾರ್ಮಿಕನ ಆರೋಗ್ಯ ವಿಚಾರಿಸಿದರು. ಬಳಿಕ ಪೊಲೀಸರ ವಿರುದ್ಧ ಗರಂ ಆದ ಸಚವ ಕೆ.ಎಸ್ ಈಶ್ವರಪ್ಪ, ಕೂಡಲೇ ಎಸ್ ಪಿಗೆ ಕರೆ ಮಾಡಿ ಪುಂಡರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು. ಅಲ್ಲದೆ ಸಂಜೆಯೊಳಗೆ ಆರೋಪಿಗಳನ್ನ ಬಂಧಿಸಬೇಕು ಎಂದು ಗಡುವು ನೀಡಿದರು. ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ಈ ವಿಚಾರದಲ್ಲಿ ಪೊಲೀಸರು ಬೇಜವಾಬ್ದಾರಿ ತೋರಿದ್ದಾರೆ. ಗೂಂಡಾಗಳಿಗೆ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಈ ರೀತಿ ಹಲ್ಲೆಯಾಗಿದೆ. ಗಾಂಜಾ ವ್ಯಸನಿಗಳು ಹಲ್ಲೆ ನಡೆಸಿದ್ದಾರೆ ಎಂದರು. : –- - – - – – – .