ನನ್ನ ಬಳಿ ದಾಖಲೆ ಇದೆ ಎಂದು ಎಲ್ಲಿ ಹೇಳಿದ್ದೆ..? ಬಿಜೆಪಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್. ಬೆಂಗಳೂರು,ನವೆಂಬರ್,17,2021(..):ರಾಜ್ಯದಲ್ಲಿ ಸದ್ಧು ಮಾಡುತ್ತಿರುವ ಬಿಟ್ ಕಾಯಿನ್ ಹಗರಣ ಕುರಿತು ದಾಖಲೆ ಕೇಳಿದ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಬಿಟ್ ಕಾಯಿನ್ ಹಗರಣದ ದಾಖಲೆ ನನ್ನ ಬಳಿ ಇದೆ ಎಂದು ಎಲ್ಲಿ ಹೇಳಿದ್ದೆ. ಬಿಟ್ ಕಾಯಿನ್ ಬಗ್ಗೆ ಮಾತಾಡ್ತೀನಿ ಎಂದು ಹೇಳಿದ್ದೆ. ದಾಖಲೆ ಇದೆ ಎಂದು ಹೇಳಿಲ್ಲ ಎಂದರು. ಹಾಗೆಯೇ ಬಿಜೆಪಿಯವರ ಬಳಿಯೇ ಸರ್ಕಾರವಿದೆ. ಬಿಜೆಪಿ ಸರ್ಕಾರವೇ ದಾಖಲೆ ಕೊಡಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು. ಬಿಟ್ ಕಾಯಿನ್ ದಂಧೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪದಲ್ಲಿ ತೊಡಗಿದ್ದು ‘ಕೈ’ ನಾಯಕರಿಗೆ ದಾಖಲೆ ಬಿಡುಗಡೆ ಬಿಜೆಪಿ ಸವಾಲು ಹಾಕಿತ್ತು. : - - - - – .