ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್ ದಕ್ಷಿಣ ಕನ್ನಡ, ಜೂನ್,25,2024 (..):ಹಾಲಿನ ದರ ಹೆಚ್ಚಳ ಮಾಡಬೇಕೆಂದು ರೈತರ ಒತ್ತಡವಿತ್ತು. ಹೀಗಾಗಿ ರೈತರ ಒತ್ತಾಯದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಾಲಿನ ದರ ಏರಿಕೆಯನ್ನ ಸಮರ್ಥಿಸಿಕೊಂಡರು. ಈ ಕುರಿತು ಇಂದು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,ನೀರಿನ ಬೆಲೆಯು ಲೀಟರ್ ಗೆ 25 ರೂಪಾಯಿ ಆಗಿದೆ. ಹಾಲಿನ ಬೆಲೆ ಹೆಚ್ಚು ಮಾಡಬೇಕೆಂದು ರೈತರ ಒತ್ತಡವಿತ್ತು. ಹಾಗಾಗಿ ರೈತರ ಒತ್ತಾಯದಿಂದಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಕೆಎಂಎ‍ಫ್ ಹಾಲಿನ ದರವನ್ನ 2 ರೂ ಹೆಚ್ಚಳ ಮಾಡಿದೆ. ಹಾಲಿನ ಪ್ರಮಾಣವನ್ನ ಹೆಚ್ಚಿಸುವುದರ ಜೊತೆಗೆ ದರವನ್ನೂ ಏರಿಸಿದೆ. ಒಂದು ಲೀಟರ್ ಬದಲಿಗೆ 1050 ಎಂಎಲ್​ ನ ಪ್ಯಾಕೆಟ್ ಹಾಲು​ ಸಿಗಲಿದೆ. 50 ಎಂಲ್​ ಹಾಲಿನ ಪ್ಯಾಕೆಟ್​ಗೆ 2 ರೂಪಾಯಿ ದರ ಏರಿಸಲಾಗಿದೆ. : , , ,