ಪೋಲಾಗುತ್ತಿದ್ದ ನೀರಿನ ಕುರಿತು ಸುದ್ಧಿ ಮಾಡಿದ್ದಕ್ಕೆ ವರದಿಗಾರನ ಮೇಲೆ ಹಲ್ಲೆ. ತುಮಕೂರು,ನವೆಂಬರ್,15,2021(..):ಪೋಲಾಗುತ್ತಿದ್ದ ನೀರಿನ ಕುರಿತು ಸುದ್ದಿ ಮಾಡಿದ ತುಮಕೂರು ಮಿತ್ರ ದಿನಪತ್ರಿಕೆ ತಾಲ್ಲೂಕು ವರದಿಗಾರನ ಮೇಲೆ ಹಲ್ಲೆ ಮಾಡಲಾಗಿದೆ. ವರದಿಗಾರ ರಮೇಶ್ ಗೌಡರ ಮೇಲೆ ನೆನ್ನೆ ಹಲ್ಲೆ ನಡೆದಿದ್ದು, ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ರಮೇಶ್ ಗೌಡ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ರಂಗರಾಜು, ನಿರ್ದೇಶಕ ರಂಗನಾಥ್, ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ರಮೇಶ್ ಗೌಡರ ಆರೋಗ್ಯ ವಿಚಾರಿಸಿ ಆರೋಪಿಗಳನ್ನು ಕೂಡಲೇ ಬಂಧಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುವ ಭರವಸೆ ನೀಡಿದರು. : - – – -