ಕೋವಿಡ್ ನಿರ್ವಹಣೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಮೈಕ್ರಾನ್ ಕಂಪನಿಯಿಂದ ಆಧುನಿಕ ಸಾಧನಗಳ ಕೊಡುಗೆ. ಬೆಂಗಳೂರು,ನವೆಂಬರ್,16,2021(..):ಮೈಕ್ರಾನ್ ಟೆಕ್ನಾಲಜೀಸ್ ಕಂಪನಿಯು ಕೋವಿಡ್ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ, ಪ್ಯಾಲೇಸ್ ಗುಟ್ಟಹಳ್ಳಿಯ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಾಗಡಿ ಸರಕಾರಿ ಆಸ್ಪತ್ರೆಗೆ ನೀಡಿದ ಅತ್ಯಾಧುನಿಕ ಪ್ಯಾರಾ ಮಾನಿಟರ್ ಉಪಕರಣಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದರು. ಇದರ ಅಂಗವಾಗಿ ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ನಲವತ್ತು 5-ಪ್ಯಾರಾ ಮಾನಿಟರ್, ಇಪ್ಪತ್ತು 6-ಪ್ಯಾರಾ ಮಾನಿಟರ್, 3 ಸಾವಿರ ಡಿಜಿಟಲ್ ಪಲ್ಸ್ ಆಕ್ಸಿಮೀಟರ್, 20 ಸಾವಿರ ಎನ್-95 ಮಾಸ್ಕ್, 50 ಸಾವಿರ ಸರ್ಜಿಕಲ್ ಮಾಸ್ಕ್, 15 ಸಾವಿರ ಏಪ್ರಾನ್ಸ್, 2 ಸಾವಿರ ಕೈಗವಸುಗಳು ಮತ್ತು 3 ಸಾವಿರ ಮುಖಕವಚಗಳನ್ನು ದೇಣಿಗೆಯಾಗಿ ಕೊಟ್ಟಿತು. ಇವುಗಳ ಪೈಕಿ ಇಪ್ಪತ್ತು 5-ಪ್ಯಾರಾ ಮಾನಿಟರುಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ, 16 ಉಪಕರಣಗಳನ್ನು ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು 4 ಮಾನಿಟರುಗಳನ್ನು ರಾಮನಗರ ಜಿಲ್ಲೆಯ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಸಾಧನೋಪಕರಣಗಳಿಗೆ ಚಾಲನೆ ನೀಡಿದ ಸಚಿವ ಅಶ್ವಥ್ ನಾರಾಯಣ್, ಅವುಗಳ ಕಾರ್ಯವಿಧಾನವನ್ನು ಪ್ರತ್ಯಕ್ಷವಾಗಿ ತಿಳಿದುಕೊಂಡರು. ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. : - – – -- … . , 16, 2021 (..): , , .. , , ’ , , -19 . . .. . 5- , 6- , , 20,000 -95 , 50,000 , 15,000 , 2,000 , 3,000 . , 5- .. , , 16 , 4 , , .: / / / / .