ಪಠ್ಯ ಪುಸ್ತಕದಲ್ಲಿ ‘ಅಪ್ಪು’ ಪಾಠ ಸೇರಿಸಲು ಮನವಿ: ಸಹಿ ಸಂಗ್ರಹಿಸಿ ಸಿಎಂಗೆ ಪತ್ರ ಬರೆದ ಅಭಿಮಾನಿ. ಮೈಸೂರು,ನವೆಂಬರ್,15,2021(..):ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕನ್ನಡ ಪಠ್ಯ ಪುಸ್ತಕಕ್ಕೆ ಪಾಠ ಸೇರಿಸುವಂತೆ ಅಭಿಮಾನಿಯೊಬ್ಬರು ಸಹಿ ಸಂಗ್ರಹಿಸಿದ್ದಾರೆ. ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿ ಸಹಿ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರಾಜ್ ಅರಸು ಎಂಬುವವರು ನೂರಾರು ಜನರಿಂದ ಸಹಿ ಸಂಗ್ರಹ ಮಾಡಿದ್ದಾರೆ. ನಟ ಪುನೀತ್ ರಾಜಕುಮಾರ್ ಹೆಸರನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಬೇಕೆಂದು ದೇವರಾಜ್ ಅರಸು ಮನವಿ ಮಾಡಿದ್ದಾರೆ. ಅಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದ ಅಭಿಮಾನಿ ದೇವರಾಜ್ ಅರಸು, ಪುನೀತ್ ರಾಜಕುಮಾರ್ ಅಪ್ರತಿಮ ನಟ. ಪುನೀತ್ ರಾಜಕುಮಾರ್ ಸರಳತೆ, ಸ್ನೇಹ ಆದರ್ಶ. ಸಾಮಾಜಿಕ ಸೇವೆಗಳು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ಮನವಿ ಮಾಡಿದ್ದಾರೆ. : - – - - - .. ‘’’ : , 15, 2021 (..): ‘’’ . , . 29. ’ . , , .: / / / .