ಕಾವೇರಿ ನೀರಿಗೆ ಚರಂಡಿ ನೀರು ಮಿಶ್ರಣ: ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ. ಬೆಂಗಳೂರು,ನವೆಂಬರ್,15,2021(..): ಬೆಂಗಳೂರಿನಲ್ಲಿ ಕಾವೇರಿ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಈ ನೀರನ್ನ ಕುಡಿದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿ ಈ ಘಟನೆ ನಡೆದಿದೆ ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣಗೊಂಡು, ಅದೇ ನೀರನ್ನು ಜನರು ಕುಡಿದಿದ್ದರಿಂದಾಗಿ, 20ಕ್ಕೂ ಹೆಚ್ಚು ಜನರಿಗೆ ವಾಂತಿ, ಬೇಧಿಯಾಗಿ ಅಸ್ವಸ್ಥಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ ಬಿ ಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿನ ಕಾವೇರಿ ನೀರು ಸಂಪರ್ಕವಿದೆ. ಈ ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣಗೊಂಡಿದೆ ಎನ್ನಲಾಗಿದೆ. ಇದೇ ನೀರನ್ನು ಬಡಾವಣೆಯ ಅನೇಕರು ಸೇವಿಸಿದ್ದರಿಂದಾಗಿ 20ಕ್ಕೂ ಹೆಚ್ಚು ಜನರಿಗೆ ವಾಂತಿ, ಬೇಧಿ ಕಾಣಿಸಿಕೊಂಡು, ಅಸ್ವಸ್ಥಗೊಂಡಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು ಈ ಬಗ್ಗೆ ಸ್ಥಳೀಯ ನಿವಾಸಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. : –- – - - 20 -