ಸೇನಾ ವಾಹನದ ಮೇಲೆ ಉಗ್ರರ ದಾಳಿ: ಐವರು ಯೋಧರು ಸೇರಿ 7 ಮಂದಿ ಸಾವು. ಮಣಿಪುರ,ನವೆಂಬರ್,13,2021(..):ಸೇನಾವಾಹನದ ಮೇಲೆ ಉಗ್ರರ ದಾಳಿ ನಡೆಸಿದ್ದು ಈ ವೇಳೆ ಐವರು ಯೋಧರು ಸೇರಿ 7 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಣಿಪುರದ ಚುರಚಂದಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಸೇನಾ ಕರ್ನಲ್ ಹಾಗೂ ಐವರು ಯೋಧರು ಹುತಾತ್ಮರಾಗಿದ್ದಾರೆ. ಅಸ್ಸಾಂ 46 ರೈಫಲ್ ​​ನ ಕಮಾಂಡಿಂಗ್​ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಅಸ್ಸಾಂ ರೈಫಲ್ಸ್‌ ಗೆ ಸೇರಿದ ಸೇನಾ ವಾಹನದ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಾಳಿ ನಡೆದ ಜಾಗವು ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಇಂಫಾಲ್‌ ನಿಂದ 100 ಕಿ,.ಮೀ ದೂರದಲ್ಲಿದೆ. ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು, ಸೇನಾಧಿಕಾರಿ ಮತ್ತು ಅವರ ಕುಟುಂಬ ಸದಸ್ಯರು ಸಾವಿಗೀಡಾಗಿರುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವುದಾಗಿ ಅವರು ತಿಳಿಸಿದ್ಧಾರೆ. : - – - -7