2020-21 ಸಾಲಿನ ಖಾಸಗಿ ಶಾಲೆ ಶುಲ್ಕ ವಿಚಾರ: ಹೆಚ್ಚುವರಿ ಫೀಸ್ ವಾಪಸ್ ನೀಡಲು ಸರ್ಕಾರ ಆದೇಶ. ಬೆಂಗಳೂರು,ನವೆಂಬರ್,13,2021(..):ಖಾಸಗಿ ಶಾಲಾ ಶುಲ್ಕ ಪಾವತಿಸಿರುವ ಪೋಷಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಾಪಸ್ ನೀಡುವಂತೆ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶ ನೀಡಿದೆ. ಖಾಸಗಿ ಶಾಲೆಗಳಲ್ಲಿ 2020-21 ನೇ ಸಾಲಿನ ಶೇಕಡಾ 30 ರಷ್ಟು ಶುಲ್ಕ ಕಡಿತ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಈ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಶುಲ್ಕ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆದುಕೊಳ್ಳುವಂತೆ ಆದೇಶಿಸಿತ್ತು. ಶುಲ್ಕ ಕಡಿಮೆ ಮಾಡುವಂತೆ ಪೋಷಕ ಸಂಘಟನೆಗಳು ಈ ಹಿಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಸದ್ಯ ಹೈಕೋರ್ಟ್ ಆದೇಶದಂತೆ ಸರ್ಕಾರ ಅಧಿಕೃತವಾಗಿ 2020-21ನೇ ಸಾಲಿನ ಶುಲ್ಕ ಆದೇಶ ಪ್ರಕಟ ಮಾಡಿದೆ. ಆ ಮೂಲಕ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆಯಲು ಆದೇಶಿಸಿದೆ. : - - -2020-21- – - … 2020-21: , 13, 2021 (..): . , 2020-21 . 30% 2020-21. ’ . ’ 15%. . , 2020-21 15%.: / / /