ಪರಿಷತ್ ಚುನಾವಣೆ ಗೆಲ್ಲಲು ಕೇಸರಿ ಪಾಳಯ ತಂತ್ರ: ನ.19 ರಂದು ಜನ ಸ್ವರಾಜ್ ಯಾತ್ರೆಗೆ ಚಾಲನೆ. ಮೈಸೂರು,ನವೆಂಬರ್,13,2021(..):ರಾಜ್ಯ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರು ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಪರಿಷತ್ ನಲ್ಲಿ ನ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಕೇಸರಿ ಪಾಳಯ ತಂತ್ರ ಹೆಣೆಯುತ್ತಿದೆ. ಈ ಮಧ್ಯೆ ಮೈಸೂರು ಚಾಮರಾಜ ನಗರ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಗ್ರಾಮ ಪಂಚಾಯತಿ ಸದಸ್ಯ ಮತದಾರನ್ನು ಒಲೈಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನ ಸ್ವರಾಜ್ ಯಾತ್ರೆ ಹಮ್ಮಿಕೊಂಡಿದೆ. ನಾಲ್ಕು ವಿಭಾಗಗಳಲ್ಲಿ ಜನ ಸ್ವರಾಜ್ ಯಾತ್ರೆ ನಡೆಯಲಿದ್ದು ನ. 19 ರಂದು ಯಾತ್ರೆಗೆ ಚಾಲನೆ ಸಿಗಲಿದೆ. ಮೈಸೂರು ವಿಭಾಗಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಉಸ್ತುವಾರಿಯಾಗಿದ್ದು, ಜನ ಸ್ವರಾಜ್ ಯಾತ್ರೆ ಮುನ್ನವೇ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ದನೆಗೆ ಪ್ಲಾನ್ ರೂಪಿಸಿದ್ದು ಸೂಕ್ಷ್ಮಾತಿ ಹಿಂದುಳಿದ ಸಮುದಾಯಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಕಳೆದ ಬಾರಿ ಅಲ್ಪ ಮತಗಳಿಂದ ಸೋಲು ಕಂಡಿದ್ದ ಬಿಜೆಪಿ‌, ಈ ಬಾರಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಮಲ ಅರಳಿಸಲು ರೆಡಿಯಾಗಿದೆ. … : 19Mysuru, 13, 2021 (..): 25 . . - - ‘ ’ . 19. .. . ‘ .’ . , . .: / / : - - --