ಫ್ಲೈಓವರ್ ಮೇಲೆ ಸೆಲ್ಫಿ ಮೋಜಿಗೆ ಹೋದ ಇಬ್ಬರು ಯುವಕರು ಬಲಿ ಬೆಂಗಳೂರು,12,2021(..):ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ತಾವರೇಕೆರೆ ಬಳಿ ರಾ.ಹೆ. 75ರ ಫ್ಲೈಓವರ್ ನಲ್ಲಿ ಈ ಘಟನೆ ನಡೆದಿದೆ. ವೈಟ್ ಫಿಲ್ಡ್ ಮೂಲದ ದಿನೇಶ್, ವಿನಯ್ ಮೃತ ಯುವಕರು. ಫ್ಲೈಓವರ್ ಮೇಲೆ ಇಬ್ಬರು ಯುವಕರು ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಈ ವೇಳೆ ಕ್ಯಾಂಟರ್ ಡಿಕ್ಕಿಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಮುಂದಾದರೂ ಫ್ಲೈ ಓವರ್ ಮೇಲೆ ಹೋಗುವಾಗ ಎಚ್ಚರ ಇರಬೇಕು. ಸೆಲ್ಫಿ ಮೋಜಿಗೆ ಹೋದ್ರೆ ಇದೇ ರೀತಿ ಪ್ರಾಣ ತೆತ್ತಬೇಕಾಗುತ್ತದೆ ಎಂಬುದು ಅರಿವಿರಬೇಕಿದೆ. : - - –-