ಮಹಿಳೆ ಮೃತಪಟ್ಟರೂ ಗರ್ಭದಲ್ಲಿದ್ಧ ಶಿಶುವಿನ ಜೀವ ಉಳಿಸಿದ ವೈದ್ಯರಿಗೆ ಸಚಿವ ಸಿ .ಸಿ .ಪಾಟೀಲ್ ಅಭಿನಂದನೆ. ಗದಗ,ನವೆಂಬರ್,12,2021(..):ಮಹಿಳೆ ಮೃತಪಟ್ಟರೂ ಸಹ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭದಲ್ಲಿದ್ಧ ಶಿಶುವಿನ ಜೀವವನ್ನ ಉಳಿಸಿರುವ ಘಟನೆ ಗದಗ ಜಿಲ್ಲೆಯ ದಂಡಪ್ಪ ಮಾನೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆ ಸಲ್ಲಿಸಿರುವ ಸಚಿವ ಸಿಸಿ ಪಾಟೀಲ್, ಸಿಮಹಿಳೆಯೊಬ್ಬರು ಮೃತಪಟ್ಟರೂ ಸಹ ಅತ್ಯಂತ ಕಾಳಜಿಯಿಂದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಅವರ ಉದರದಲ್ಲಿ ಶಿಶುವನ್ನು ಬದುಕಿಸಿ ಮಾನವೀಯತೆ ಮೆರೆದ ಗದಗ ಜಿಲ್ಲೆಯ ದಂಡಪ್ಪ ಮಾನೆ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಅನ್ನಪೂರ್ಣ ಎಂಬವರು ಇತ್ತೀಚೆಗೆ ಹೆರಿಗೆ ನಿಮಿತ್ತ ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಆರೋಗ್ಯ ಕ್ಷೀಣಿಸಿ ಮೃತಪಟ್ಟರೂ ಸಹ ಅವರ ಗರ್ಭದಲ್ಲಿರುವ ಮಗು ಜೀವಂತವಾಗಿರುವುದನ್ನು ವೈದ್ಯರು ಪತ್ತೆಹಚ್ಚಿ ತಕ್ಷಣ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಪ್ರಾಣ ಉಳಿಸಿರುವುದು ಪ್ರಶಂಸನೀಯವಾಗಿದೆ. ಇದೊಂದು ಅಪರೂಪದ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿದ್ದು, ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ವೈದ್ಯರ ತಂಡದಲ್ಲಿದ್ದ ಬಸನಗೌಡ ಕರಿಗೌಡರ್ , ಡಾ. ಶೃತಿ, ಡಾ. ವಿನೋದ್, ಡಾ. ಜಯರಾಜ್, ಡಾ. ಅಜಯ್, ಡಾ. ಕೀರ್ತನ್ ಅವರನ್ನು ಈ ಬಗ್ಗೆ ಅಭಿನಂದಿಸುತ್ತೇನೆ ಎಂದಿದ್ದಾರೆ. ಇಂತಹ ವಿಶಿಷ್ಟ ಮಾನವೀಯ ಸೇವೆಯಿಂದ ನಮ್ಮ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚುವುದಲ್ಲದೆ , ಸಾರ್ವಜನಿಕರಲ್ಲಿ ಸರ್ಕಾರಿ ವೈದ್ಯರುಗಳ ಕುರಿತು ವಿಶ್ವಾಸಾರ್ಹತೆಯೂ ವೃದ್ಧಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಇದೊಂದು ನಿಜಕ್ಕೂ ಮಾದರಿ ಸೇವೆಯಾಗಿದೆ ಎಂದು ಸಚಿವ ಸಿ.ಸಿ ಪಾಟೀಲ್ ನುಡಿದರು. : -. - - –- – … : – .. , 12, 2021 (..): . . .. . , , . , . . . . , . , . , . , . , . , . . .. . “ ,” .: / / / /