ಜಿಎಸ್ ಟಿ ಇನ್ಸ್ ಪೆಕ್ಟರ್ ಕೂಡಿ ಹಾಕಿ ಹಲ್ಲೆ: ಪಬ್ ಮಾಲೀಕ ಮತ್ತು ಬೌನ್ಸರ್ಸ್ ಅರೆಸ್ಟ್. ಬೆಂಗಳೂರು,ನವೆಂಬರ್,10,2021(..):ಜಿಎಸ್ ಟಿ ಇನ್ಸ್ ಪೆಕ್ಟರ್ ರನ್ನ ಕೂಡಿ ಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಪಬ್ ಮಾಲೀಕ ಮತ್ತು ಬೌನ್ಸರ್ಸ್ ಗಳನ್ನ ನಗರದ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲದ ಹ್ಯಾಪಿ ಬ್ರೋ ಪಬ್ ನಲ್ಲಿ ಈ ಘಟನೆ ನಡೆದಿದೆ. ಪಬ್ ಗೆ ಬಂದಿದ್ಧ ಜಿಎಸ್​ಟಿ ಇನ್​ಸ್ಪೆಕ್ಟರ್​​ ವಿನಯ್ ಮಂಡಲ್ ರನ್ನ ಕೂಡಿಹಾಕಿ, ಪಬ್ ಮಾಲಿಕ ರಾಕೇಶ್ ಗೌಡ ಮತ್ತು ಬೌನ್ಸರ್​​ ಗಳು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪಬ್ ಗೆ ಬಂದಿದ್ದ ಜಿಎಸ್​ಟಿ ಇನ್​ಸ್ಪೆಕ್ಟರ್​​ ವಿನಯ್ ಮಂಡಲ್ ಬಳಿ ಬಂದು ಪಬ್​ ಮಾಲಿಕ ರಾಕೇಶ್ ಗೌಡ ಪರಿಚಯ ಮಾಡಿಕೊಂಡಿದ್ದ. ತಡರಾತ್ರಿ ಹನ್ನೆರಡು ಗಂಟೆ ಬಳಿಕ ಬಿಲ್ ಕೇಳಿದ್ದ. ಆಗ ಅವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದ್ದು. ರಾತ್ರಿ ಒಂದು ಗಂಟೆಯವರೆಗೂ ಇಬ್ಬರೂ ವಾದ ಮಾಡಿಕೊಂಡಿದ್ದಾರೆ. ಬಳಿಕ ನೀನು ಫೇಕ್ ಜಿಎಸ್​ಟಿ ಇನ್​ಸ್ಪೆಕ್ಟರ್ ಎಂದು ಇನ್​ಸ್ಪೆಕ್ಟರ್​​ ವಿನಯ್​ ರಿಗೆ ಪಬ್​ ಮಾಲಿಕ ರಾಕೇಶ್ ಬೈದಿದ್ದು ನಂತರ. ಇನ್​ಸ್ಪೆಕ್ಟರ್​​ ವಿನಯ್ ​ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. : - –- – –-