ರಿಷಭ್ ಪಂತ್ ಸಂಸ್ಕಾರ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋ ಬೆಂಗಳೂರು, ನವೆಂಬರ್ 10, 2021 (..):ನಮೀಬಿಯ ತಂಡದ ವಿರುದ್ಧ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಭಾರತೀಯ ಸಂಸ್ಕಾರ ಅನುಸರಿಸುವ ಮೂಲಕ ಗಮನಸೆಳೆದಿದ್ದಾರೆ. ನಮೀಬಿಯ ಬ್ಯಾಟರ್‌ವೊಬ್ಬನ ಬ್ಯಾಟ್ ಅನ್ನು ರಿಷಭ್ ಪಂತ್ ಹಿಂಬದಿಯಿಂದ ಗೊತ್ತಿಲ್ಲದೆ ತುಳಿದರು. ತಕ್ಷಣವೇ ಎಚ್ಚೆತ್ತುಗೊಂಡ ರಿಷಭ್ ಪಂತ್, ಬ್ಯಾಟ್‌ಗೆ ನಮಸ್ಕರಿಸಿ ಸಂಸ್ಕಾರ ಮೆರೆದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮೀಬಿಯ ಎದುರು ತೋರಿದ ಸಂಸ್ಕಾರದಿಂದ ರಿಷಬ್ ಭಾರತೀಯ ಮನ ಗೆದ್ದಿದ್ದಾರೆ. ಭಾರತ ತಂಡದ ಯುವ ವಿಕೆಟ್ ಕೀಪರ್ ಮೈದಾನದಲ್ಲೂ ಉತ್ತಮ ನಿರ್ವಹಣೆ ತೋರುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲೂ ಚುರುಕಾಗಿರುವ ಕಾರ್ಯನಿರ್ವಹಿಸುತ್ತಿದ್ದಾರೆ.